ಬೆಂಗಳೂರು, ಫೆ.10 (Daijiworld News/PY): ನೂತನ ಶಾಸಕರಿಗೆ ಖಾತೆ ಹಂಚಿಕೆ ಮಾಡಿ ಸಿಎಂ ಬಿಎಸ್ವೈ ಅವರು, ನೂತನ ಶಾಸಕರ ಬೇಡಿಕೆಯಂತೇ ಅವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ ಎನ್ನಲಾಗಿದೆ.
ಸಿಎಂ ಬಿಎಸ್ವೈ ಅವರು ರಮೇಶ್ ಜಾರಕಹೊಳಿ ಅವರ ಬೇಡಿಕೆಯಂತೆಯೇ ಅವರಿಗೆ ಜಲ ಸಂಪನ್ಮೂಲ ಖಾತೆ ನೀಡಿದ್ದು, ಶಿವರಾಮ್ ಹೆಬ್ಬಾರ್ಗೆ ಪೌರಾಡಳಿತ, ಬಿ.ಸಿ.ಪಾಟೀಲ್ - ಇಂಧನ, ನಾರಾಯಣಗೌಡ- ಆಹಾರ ಹಾಗೂ ನಾಗರಿಕ ಸರಬರಾಜು, ಶ್ರೀಮಂತ ಪಾಟೀಲ್- ಸಕ್ಕರೆ ಹಾಗೂ ಕೆ.ಸುಧಾಕರ್- ವೈದ್ಯಕೀಯ ಖಾತೆ ಹಂಚಿಕೆ ಮಾಡಿದ್ದಾರೆ.
ಚುನಾವಣೆಯಲ್ಲಿ ಗೆದ್ದಾಗಿನಿಂದಲೂ ರಮೇಶ್ ಜಾರಕಿಹೊಳಿ ಅವರು ತಮಗೆ ಡಿಸಿಎಂ ಸ್ಥಾನ ನೀಡದಿದ್ದರೂ ಜಲಸಂಪನ್ಮೂಲ ಖಾತೆಯೇ ಬೇಕು ಎಂಬ ಬೇಡಿಕೆ ಸಲ್ಲಿಸಿದ್ದರು. ಅಲ್ಲದೇ ಸಿಎಂ ಬಿಎಸ್ವೈ ಅವರು ಕೂಡಾ ರಮೇಶ್ ಜಾರಕಿಹೊಳಿ ಅವರಿಗೆ ಜಲಸಂಪನ್ಮೂಲ ಖಾತೆ ನೀಡಲು ಒಲವು ತೋರಿದ್ದರು. ಆದರೆ, ಈ ವಿಚಾರವಾಗಿ ಕೆಲ ಮೂಲ ಬಿಜೆಪಿ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ ನೂತನ ಸಚಿವ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ನೀಡಲಾಗಿದ್ದು, ಈ ಮುಖಾಂತರ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಗೋಕಾಕ್ ಶಾಸಕರ ಶಕ್ತಿಯನ್ನು ಸಿಎಂ ಹೆಚ್ಚಿಸಿದ್ದಾರೆ ಎನ್ನಲಾಗಿದೆ.
ರಮೇಶ್ ಜಾರಕಿಹೊಳಿ - ನೀರಾವರಿ, ಬಿ.ಸಿ.ಪಾಟೀಲ್ - ಇಂಧನ ಖಾತೆ, ಡಾ.ಸುಧಾಕರ್ - ವೈದ್ಯಕೀಯ ಶಿಕ್ಷಣ, ನಾರಾಯಣಗೌಡ - ಆಹಾರ ಮತ್ತು ನಾಗರಿಕ, ಶಿವರಾಂ ಹೆಬ್ಬಾರ್ - ಪೌರಾಡಳಿತ, ಎಸ್.ಟಿ. ಸೋಮಶೇಖರ್ - ಸಹಕಾರ, ಭೈರತಿ ಬಸವರಾಜು - ನಗರಾಭಿವೃದ್ಧಿ, ಗೋಪಾಲಯ್ಯ - ಕಾರ್ಮಿಕ ಖಾತೆ, ಶ್ರೀಮಂತ ಪಾಟೀಲ್ - ಸಕ್ಕರೆ, ಆನಂದ್ ಸಿಂಗ್ - ಗಣಿ ಮತ್ತು ಭೂ ವಿಜ್ಞಾನ ಖಾತೆಯನ್ನು ನೀಡಲಾಗಿದೆ.