ಕರ್ನೂಲ್, ಫೆ.10 (DaijiworldNews/PY): "ನನ್ನ ಎದೆಗೆ ಗುಂಡಿಕ್ಕಿದರೂ ದಾಖಲೆ ಪತ್ರಗಳನ್ನು ಕೊಡುವುದಿಲ್ಲ" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಸೋಮವಾರ ಹೇಳಿದ್ದಾರೆ.
ಆಂಧ್ರ ಪ್ರದೇಶದ ಕರ್ನೂಲ್ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನಾನು ಭಾರತದಲ್ಲೇ ಇರುತ್ತೇನೆ. ಆದರೆ ದಾಖಲೆ ಪತ್ರಗಳನ್ನು ಕೊಡುವುದಿಲ್ಲ. ದಾಖಲೆ ಕೇಳಿದರೆ ನನ್ನ ಎದೆಯನ್ನು ತೋರಿಸಿ ಗುಂಡಿಕ್ಕುವಂತೆ ತಿಳಿಸುತ್ತೇನೆ. ಯಾಕೆಂದರೆ ನನ್ನ ಹೃದಯದಲ್ಲಿ ಭಾರತದ ಮೇಲಿರುವ ಪ್ರೀತಿ ಅಡಕವಾಗಿದೆ" ಎಂದು ಹೇಳಿದರು.
"ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ವಿರುದ್ದ ಧ್ವನಿಯೆತ್ತುವವರು ನಿಜಾರ್ಥದಲ್ಲಿ ಹೋರಾಟಗಾರರು" ಎಂದರು.