ಕೋಲ್ಕತಾ, ಫೆ 10 (DaijiworldNews/SM): ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹಲವು ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಿಎಂ ಮಮತಾ ಮುಂದಾಗಿದ್ದಾರೆ.
2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ಸಿಎಂ ಮಮತಾ ಬ್ಯಾನರ್ಜಿ ಅವರ ಕಲ್ಯಾಣ ಕಾರ್ಯಕ್ರಮಗಳು ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಪಶ್ಚಿಮ ಬಂಗಾಳದ ಜನತೆಗೆ ಷರತ್ತು ಬದ್ಧ ಉಚಿತ ವಿದ್ಯುತ್ ಸೇರಿದಂತ ಹಲವು ಜನಪ್ರಿಯ ಯೋಜನೆಗಳನ್ನು ಸಿಎಂ ಮಮತಾ ಘೋಷಿಸಿದ್ದಾರೆ.
ಮಮತಾ ಅವರು ಘೋಷಣೆ ಮಾಡಿರುವ ಯೋಜನೆ ದೆಹಲಿ ಮುಖ್ಯಮಂತ್ರಿಯವರ ಯೋಜನೆಯನ್ನೇ ತಮ್ಮಲ್ಲಿಗೂ ಜಾರಿಗೆ ಮುಂದಾಗಿದ್ದಾರೆ. ಆ ಮೂಲಕ ರಾಜ್ಯದಲ್ಲಿರುವ ಬಡ ಜನತೆಗೆ ಮೂರು ತಿಂಗಳಿಗೆ 75 ಯುನಿಟ್ ಗಳವರೆಗೆ ಉಚಿತ ವಿದ್ಯುತ್ ನೀಡುವ ಘೊಷಣೆಯನ್ನು ಅವರು ಮಾಡಿದ್ದಾರೆ. ಬಜೆಟ್ ಮಂಡನೆ ವೇಳೆ ಮಮತಾ ಈ ಘೋಷಣೆ ಮಾಡಿದ್ದಾರೆ.