ನವದೆಹಲಿ, ಫೆ 11 (Daijiworld News/MSP): ಭಾರತ ಸರ್ಕಾರವೂ 1 ರೂ. ಮುಖ ಬೆಲೆಯ ನೋಟುಗಳನ್ನು ಮತ್ತೆ ಚಲಾವಣೆ ತರಲು ನಿರ್ಧರಿಸಿದೆ. ಆರ್ಬಿಐ 1 ರೂ. ಮುಖ ಬೆಲೆಯ ನೋಟುಗಳನ್ನು ಹೊರತುಪಡಿಸಿ ಉಳಿದೆಲ್ಲ ನೋಟುಗಳನ್ನು ಮುದ್ರಿಸುತ್ತದೆ. ಆದರೆ ಒಂದು ರೂ. ಮುಖ ಬೆಲೆಯ ನೋಟುಗಳನ್ನು ಮುದ್ರಿಸುವುದು ಮಾತ್ರ ಕೇಂದ್ರ ಸರಕಾರದ ವಿತ್ತ ಸಚಿವಾಲಯ ಹೀಗಾಗಿ ಈ ನೋಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬದಲು ಗವರ್ನ್ಮೆಂಟ್ ಆಫ್ ಇಂಡಿಯಾ ಎಂದು ಮುದ್ರಿತವಾಗಲಿದೆ.
ಸಧ್ಯ ಬರಲಿರುವ ಹೊಸ ನೋಟು ಆಯತಾಕಾರವಾಗಿದ್ದು ಪಿಂಕ್ ಗ್ರೀನ್’ ಬಣ್ಣವನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಮಾತ್ರವಲ್ಲದೆ ಈ ನೋಟು ಶೇ. 100ರಷ್ಟು ಹತ್ತಿ ಉಪಯೋಗಿಸಿ ಮುದ್ರಿಸಲಾಗುತ್ತದೆ. 110 ಮೈಕ್ರೊನ್ ತೆಳುವಾಗಿರುವ ಈ ನೋಟು, 90 ಜಿ.ಎಸ್.ಎಂ. ಹೊಂದಿದೆ.
ಈ ಹೊಸ ನೋಟಿನಲ್ಲಿ ಆರ್ಬಿಐ ಗವರ್ನರ ಸಹಿ ಬದಲು ಕೇಂದ್ರ ಸರಕಾರದ ಹಣಕಾಸು ಸಚಿವಾಲಯದ ಕಾರ್ಯದರ್ಶಿ ಅಟಾನು ಚಕ್ರಬೋರ್ತಿ ಅವರ ಸಹಿ ಇರಲಿದ್ದು, ಸತ್ಯಮೇವ ಜಯತೆ ಎಂಬ ವಾಕ್ಯವಿರಲಿದೆ. ಹಾಗೂ ಕೃಷಿಯ ಮಹತ್ವಕ್ಕಾಗಿ ಬೆಳೆಗಳ ಚಿತ್ರ ಇನ್ನೊಂದು ಬದಿಯಲ್ಲಿ ಸಾಗರ್ ಸಾಮ್ರಾಟ್’ ತೈಲ ಪರಿಶೋಧನ ವೇದಿಕೆಯ ಚಿತ್ರವನ್ನು ಒಳಗೊಂಡಿರುತ್ತದೆ. ಮಾತ್ರವಲ್ಲದೆ ಈ ನೋಟಿನಲ್ಲಿ ಹಲವು ವಾಟರ್ ಮಾರ್ಕ್ಗಳಿರಲಿವೆ.