ಉತ್ತರಪ್ರದೇಶ, ಫೆ.11 (DaijiworldNews/PY): ಉತ್ತರಪ್ರದೇಶದ ಭಾದೋಹಿಯಲ್ಲಿ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಹಾಗೂ ಇತರ ಆರು ಮಂದಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಸೋಮವಾರ ಆರೋಪಿಸಿದ್ದಾರೆ.
2007ರಲ್ಲಿ ಈ ಮಹಿಳೆಯ ಪತಿ ನಿಧನರಾಗಿದ್ದರು. 2014ರಲ್ಲಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಅವರ ಸೋದರಳಿಯನನ್ನು ಭೇಟಿಯಾಗಿದ್ದೆ, ಆದರೆ ಮದುವೆಯ ನೆಪದಲ್ಲಿ ಅನೇಕ ವರ್ಷಗಳಿಂದ ಆತನಿಂದ ದೈಹಿಕ ಶೋಷಣೆಗೆ ಒಳಗಾಗಿದ್ದರು ಎಂದು ಮಹಿಳೆ ಆರೋಪಿದ್ದಾರೆ ಎಂದು ಪೊಲೀಸ್ ಅಧಿಕಾರಿ ರಾಮ್ ಬದನ್ ಸಿಂಗ್ ಹೇಳಿದ್ದಾರೆ.
2017ರ ವಿಧಾನಸಭಾ ಚುನಾವಣೆಯ ಸಂದರ್ಭ ಬಿಜೆಪಿ ಶಾಸಕ ರವೀಂದ್ರನಾಥ್ ತ್ರಿಪಾಠಿ ಅವರ ಸೋದರಳಿಯ ಸುಮಾರು ಒಂದು ತಿಂಗಳ ಕಾಲ ತಂಗಿದ್ದರು, ಈ ಸಂದರ್ಭ ಶಾಸಕ ಹಾಗೂ ಅವರ ಕುಟುಂಬದಿಂದ ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ.
ಪ್ರಕರಣವನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರಿಸಲಾಗಿದೆ.