ನವದೆಹಲಿ, ಫೆ.11 (DaijiworldNews/PY): ವೈಜ್ಞಾನಿಕ ಮತ್ತು ವೈದ್ಯಕೀಯ ದೃಷ್ಟಿಕೋನದಿಂದ, ಭಾರತದಲ್ಲಿರಲಿ ಅಥವಾ ಬೇರೆಡೆ ಇರಲಿ, ವೈರಸ್ ಕೋಳಿಯಿಂದ ಹರಡುವುದಿಲ್ಲ. ದಯವಿಟ್ಟು ಅಂತಹ ಸಂದೇಶಗಳನ್ನು ರವಾನೆ ಮಾಡಬೇಡಿ ಅಥವಾ ಹಂಚಿಕೊಳ್ಳಬೇಡಿ ಎಂದು ಕೋಳಿ ಉದ್ಯಮ ಪಶುವೈದ್ಯರ ಸಂಸ್ಥೆಯ ಅಧ್ಯಕ್ಷ ಡಾ.ಜಿ.ದೇವೇಗೌಡ ಹೇಳಿದ್ದಾರೆ.
ಟಿಎನ್ಎಂ ಜೊತೆ ಮಾತನಾಡಿದ ಬೆಂಗಳೂರು ಜಿಲ್ಲಾ ಆರೋಗ್ಯ ಅಧಿಕಾರಿ, ಸೋಂಕಿತ ವ್ಯಕ್ತಿಗಳು ಅಥವಾ ವಾಹಕಗಳಿಂದ ಗಾಳಿಯ ಹನಿಗಳ ಮೂಲಕ ವೈರಸ್ ಹರಡುತ್ತದೆ. ಕೊರೋನಾ ವೈರಸ್ ಏಕಾಏಕಿ ಪ್ರಾರಂಭವಾದಾಗಿನಿಂದ ಇಂತಹ ಹಲವಾರು ನಕಲಿ ಸಲಹೆಗಳು ಹಾಗೂ ಎಚ್ಚರಿಕೆಗಳನ್ನು ವಾಟ್ಸಾಪ್ನಲ್ಲಿ ಹರಿದಾಡುತ್ತಿವೆ.ಆದರೆ ಈ ವಿಚಾರವಾಗಿ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳಿಕೆ ನೀಡಿದ ಬಳಿಕವೂ ಇದೇ ರೀತಿಯ ಸಂದೇಶವನ್ನು ರವಾನೆ ಮಾಡಲಾಗುತ್ತಿದೆ ಎಂದರು.
ಕಳೆದ ಕೆಲವು ದಿನಗಳಿಂದ ಬ್ರಾಯ್ಲರ್ ಕೋಳಿಗಳು ಕೊರೋನಾ ವೈರಸ್ ಹರಡುತ್ತಿವೆ ಎಂಬ ಸುಳ್ಳು ಸುದ್ದಿಗಳು ವೈರಲ್ ಆಗುತ್ತಿರುವುದನ್ನು ಗಮನಿಸಿದ್ದೇವೆ. ಈ ರೀತಿಯಾದ ಸುದ್ದಿಯನ್ನು ತಿಳಿಯಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಜಿಎಚ್ಎಂಸಿಯ ಮುಖ್ಯ ಪಶುವೈದ್ಯ ಅಧಿಕಾರಿ ಡಾ.ಪಿ.ವೆಂಕಟೇಶ್ವರ ರೆಡ್ಡಿ ಅವರು ಹೇಳಿದ್ದಾರೆ.
ಕೊರೋನಾ ವೈರಸ್ ಏಕಾಏಕಿ ಹುಬೈ ಪ್ರಾಂತ್ಯದಲ್ಲಿರುವ ಚೀನಾದ ವುಹಾನ್ ನಗರದಲ್ಲಿ ಆರಂಭವಾಗಿದ್ದು, ಚೀನಾದಲ್ಲಿ ಮಾತ್ರ 40,000 ಕ್ಕೂ ಹೆಚ್ಚು ವ್ಯಕ್ತಿಗಳು ಸೋಂಕಿಗೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
ಫೆ.10 ಸೋಮವಾರದಂದು ಈ ವಿಚಾರವಾಗಿ ಸ್ಪಷ್ಟನೆ ನೀಡಿದ ಕೇಂದ್ರ ಪ್ರಾಣಿ ಪಶು ಸಚಿವಾಲಯ, ಕೋಳಿಗಳು ಕೊರೋನಾ ವೈರಸ್ ಹರಡುತ್ತಿವೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಯಾವುದೇ ವರದಿಯಲ್ಲಿ ಈವರೆಗೆ ದೃಢೀಕರಿಸದ ಕಾರಣ ಕೋಳಿಗಳು ಸುರಕ್ಷಿತ ಎಂದು ಪರಿಗಣಿಸಬಹುದು ಎಂದು ತಿಳಿಸಿದ್ದಾರೆ.
ಕೋಳಿಗಳು ಕೊರೋನಾ ವೈರಸ್ ಹರಡುತ್ತಿವೆ ಎಂದು ಯಾವುದೇ ವರದಿಯಲ್ಲಿ ದೃಢಪಟ್ಟಿಲ್ಲ ಎಂದು ಪಶುಸಂಗೋಪನಾ ಆಯುಕ್ತ ಪ್ರವೀಣ್ ಮಲಿಕ್ ಅವರು ಸೋಮವಾರ ಭಾರತದ ಪೌಲ್ಟ್ರಿ ಫೆಡರೇಶನ್ನ ಸಲಹೆಗಾರ ವಿಜಯ್ ಸರ್ಡಾನ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.