ಗುವಾಹತಿ, ಫೆ 12 (Daijiworld News/MB) : ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೋ ಪುಲ್ ಅವರ ಪುತ್ರ ಶುಭಾಂಸೊ ಪುಲ್ (20) ಇಂಗ್ಲೆಂಡಿನಲ್ಲಿರುವ ತಮ್ಮ ಅಪಾರ್ಟ್ಮೆಂಟ್ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಅವರು ಆರು ತಿಂಗಳ ಹಿಂದೆ ಸಸೆಕ್ಸ್ ವಿಶ್ವವಿದ್ಯಾನಿಲಯದಲ್ಲಿ ಪ್ರವೇಶ ಪಡೆದಿದ್ದರು. ಫೆ.8 ರಂದು ಸಂಜೆ ಬ್ರಿಂಗ್ಟನ್ನಲ್ಲಿರುವ ಅವರ ಅಪಾರ್ಟ್ಮೆಂಟ್ನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಶುಭಾಂಸೊ ಪುಲ್ ಫೆಬ್ರವರಿ 8ರಂದು ಸಂಜೆ ಬ್ರಿಂಗ್ಟನ್ನಲ್ಲಿರುವ ಅವರ ಅಪಾರ್ಟ್ಮೆಂಟ್ನಲ್ಲಿ ಮೃತದೇಹ ಪತ್ತೆಯಾಗಿದೆ. ಅದಕ್ಕೂ ಮೊದಲು ತಾಯಿ ದಂಗ್ವಿಂಸಾಯಿ ಪುಲ್ ಜತೆ ಶುಭಾಂಸೊ ಮಾತನಾಡಿದ್ದಾರೆ ಎನ್ನಲಾಗಿದೆ.
ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲಿಖೊ ಫುಲ್ (47) 2016 ರ ಆಗಸ್ಟ್ 9 ರಂದು ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನು ತೆರವು ಮಾಡುವ ಮುನ್ನ ಅದೇ ನಿವಾಸದ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಅವರು ಆತ್ಮಹತ್ಯೆ ಮಾಡುವ ಮೊದಲು ನ್ಯಾಯಾಂಗ ಹಾಗೂ ರಾಜಕೀಯ ಭ್ರಷ್ಟ ವ್ಯವಸ್ಥೆಯಲ್ಲಿ ಹಿರಿಯ ಅಧಿಖಾರಿಗಳು ಶಾಮೀಲಾಗಿರುವುದನ್ನು 60 ಪುಟಗಳ ಡೆತ್ನೋಟ್ನಲ್ಲಿ ಬರೆದಿದ್ದರು.