ನವದೆಹಲಿ, ಫೆ 12 (Daijiworld News/MB) : ದೆಹಲಿ ಚುನಾವಣಾ ಫಲಿತಂಶ ಪ್ರಕಟವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ವಾಮ್ಯದ ತೈಲ ಕಂಪೆನಿಗಳು ಗೃಹಬಳಕೆಯ ಎಲ್ಪಿಜಿ ಅನಿಲ ಸಿಲಿಂಡರ್ ಬೆಲೆಯನ್ನು ದಿಢೀರನೇ 145.5 ರೂಪಾಯಿ ಹೆಚ್ಚಳ ಮಾಡಿದೆ.
14.2 ಕೆಜಿಯ ಸಿಲಿಂಡರ್ ಬೆಲೆ ರೂ. 679 ಇತ್ತು. ಈಗ 845 ಗೆ ಹೆಚ್ಚಳವಾಗಿದೆ. ಈ ಬೆಲೆ ಮಂಗಳವಾರ ಮಧ್ಯರಾತ್ರಿಯಿಂದಲ್ಲೇ ಅನ್ವಯವಾಗುತ್ತದೆ.
ಇದರಲ್ಲಿ ಸಬ್ಸಿಡಿ ಸಹಿತ ಎಲ್ಪಿಜಿ ಗ್ರಾಹಕರಿಗೆ 270 ರೂಪಾಯಿ ವಾಪಾಸ್ ಸಿಗಲಿದೆ.
ಹಾಗೆಯೇ ಕೋಲ್ಕತ್ತಾ ಹಾಗೂ ಮುಂಬೈಯಲ್ಲಿಯೂ ಎಲ್ಪಿಜಿ ದರವು ಏರಿಕೆಯಾಗಿದೆ.
ಕೋಲ್ಕತ್ತಾದಲ್ಲಿ 149 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ ದರ 896, ಮುಂಬೈನಲ್ಲಿ 145 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ ದರ 829.50 ರೂಪಾಯಿ, ಚೆನೈನಲ್ಲಿ 147 ರೂಪಾಯಿ ಏರಿಕೆಯಾಗಿದ್ದು ಪ್ರಸ್ತುತ ದರ 881 ರೂಪಾಯಿಯಾಗಿದೆ.