ಹೈದರಾಬಾದ್,ಫೆ 12 (Daijiworld News/MB) : ತನಗೆ ಕೊರೋನ ವೈರಸ್ ಸೋಂಕು ತಗಲಿದೆಯೆಂದು ತಪ್ಪಾಗಿ ಭಾವಿಸಿ ಆತಂಕಗೊಂಡ ವ್ಯಕ್ತಿಯೊಬ್ಬ ತನ್ನಿಂದಾಗಿ ಗ್ರಾಮದ ಜನರಿಗೆ ಹಾಗೂ ಕುಟುಂಬಕ್ಕೆ ಸಮಸ್ಯೆಯಾಗದಿರಲಿ ಎಂದು ಕುಟುಂಬ ಸದಸ್ಯರನ್ನೆಲ್ಲಾ ಮನೆಯೊಳಗೆ ಕೂಡಿ ಹಾಕಿ ತಾನು ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕಾಳಹಸ್ತಿಯದಲ್ಲಿ ಸೋಮವಾಋ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಬಾಲಕೃಷ್ಣಯ್ಯ ಎಂದು ಗುರುತಿಸಲಾಗಿದ್ದುಯ ಅವರ ಇತ್ತೀಚೆಗೆ ಹೃದಯದ ತಪಾಸಣೆ ಮಾಡಿಸಿಕೊಳ್ಳಲೆಂದು ತಿರುಪತಿಯ ಆಸ್ಪತ್ರೆಗೆ ಹೋಗಿದ್ದರು. ಆ ಸಂದರ್ಭದಲ್ಲಿ ಬಾಲಕೃಷ್ಣಯ್ಯ ಅವರಲ್ಲಿ ನೆಗಡಿಯ ಲಕ್ಷಣಗಳಿರುವುದನ್ನು ಗಮನಿಸಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದರು. ಇದರಿಂದಾಗಿ ತನಗೆ ಕೊರೋನಾ ವೈರಸ್ ಸೋಂಕು ತಗಲಿದೆ ಎಂದು ತಪ್ಪು ತಿಳಿದುಕೊಂಡಿದ್ದಾರೆ ಎಂದು ಮೃತ ವ್ಯಕ್ತಿಯ ಪುತರ ಬಾಲಮುರಳಿ ಹೇಳಿದ್ದಾರೆ.
ವೈದ್ಯರು ಮಾಸ್ಕ್ ಧರಿಸಲು ಸಲಹೆ ನೀಡಿದ ಬಳಿಕ ಬಾಲಕೃಷ್ಣಯ್ಯನವರು ಯಾರನ್ನೂ ತನ್ನ ಬಳಿಗೆ ಬರಲು ಬಿಡುತ್ತಿರಲಿಲ್ಲ, ನಿಮಗೆ ಕೊರೋನಾ ವೈರಸ್ ತಗಲಿಲ್ಲ ಎಂದು ಹೇಳಿದರೂ ಅವರು ಅದನ್ನು ನಂಬಲಿಲ್ಲ ಎಂದು ಹೇಳಲಾಗಿದೆ.
ಅಂತರ್ಜಾಲದಲ್ಲಿ ಕೊರೋನಾ ವೈರಸ್ ಕುರಿತಾದ ವಿಡಿಯೋಗಳನ್ನು ನೋಡಿ ತನಗೂ ಕೊರೋನಾ ವೈರಸ್ ಭಾದಿಸಿದೆ ಎಂದು ಅವರು ಅಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.