ನವದೆಹಲಿ, ಫೆ 12 (Daijiworld News/MB) : ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಒಂದು ಸ್ಥಾನವು ದಕ್ಕದ ಬಳಿಕ ಕಾಂಗ್ರೆಸ್ನ ದೆಹಲಿಯ ಮುಖ್ಯಸ್ಥ ಸ್ಥಾನಕ್ಕೆ ಪಿ ಸಿ ಚಾಕೋ ರಾಜೀನಾಮೆ ನೀಡಿದ್ದಾರೆ.
ಮಾಜಿ ಸಂಸದರಾಗಿರುವ ಪಿ ಸಿ ಚಾಕೋ ಅವರು ದೆಹಲಿಯಲ್ಲಿ ತಮ್ಮ ಹೀನಾಯ ಸೋಲಿನ ಬಗ್ಗೆ ಮಾತನಾಡಿ, "ದೆಹಲಿಯಲ್ಲಿ 2013ರಲ್ಲಿ ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗಲೇ ಕಾಂಗ್ರೆಸ್ ಪ್ರತಗಿ ಕುಂಟಿತವಾಗುತ್ತಿತ್ತು. ಆಮ್ ಆದ್ಮಿ ಪಕ್ಷ ಬಂದ ಬಳಿಕ ಕಾಂಗ್ರೆಸ್ನ ಎಲ್ಲಾ ಮತಬ್ಯಾಂಕ್ಗಳು ಆಪ್ ಕಡೆಗೆ ಹೋಯಿತು. ಆದರೆ ಈ ಮತಗಳನ್ನು ನಮ್ಮತ್ತ ತಿರುಗುಸುವಲ್ಲಿ ನಾವು ವಿಫಲರಾದೆವು" ಎಂದು ಹೇಳಿದ್ದಾರೆ.
1998ರಿಂದ 2013ರವರೆಗೆ ಶೀಲಾ ದೀಕ್ಷಿತ್ ಅವರು ದಿಲ್ಲಿ ಮುಖ್ಯಮಂತ್ರಿಯಾಗಿದ್ದರು. 2019ರ ಜುಲೈನಲ್ಲಿ ನಿಧನ ಹೊಂದಿದ್ದಾರೆ.
ದೆಹಲಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದು ಸ್ಥಾನದಲ್ಲೂ ಗೆಲವು ಸಾಧಿಸಿಲ್ಲ ಅದರಲ್ಲೂ 63 ಕಾಂಗ್ರೆಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.
ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 62 ಕ್ಷೇತ್ರಗಳೊಂದಿಗೆ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಉಳಿದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದೆ.