ಲಖನೌ, ಫೆ 13 (Daijiworld News/MB) : "ಜನರ ತೀರ್ಮಾನ ಸರಿಯಾಗಿದೆ. ಈ ಬಾರಿ ನಾವು ಹೆಚ್ಚಿನ ಪ್ರಯತ್ನ ಮಾಡಬೇಕು, ಇನ್ನು ನಾವು ಹೆಚ್ಚಿನ ಪ್ರಯತ್ನ ಮಾಡುತ್ತೇವೆ" ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಖಾತೆಯನ್ನು ತೆರಯದೆ ಹೀನಾಯವಾಗಿ ಸೋಲು ಕಂಡಿದ್ದು. ಕಾಂಗ್ರೆಸ್ನ ಮುಂದಿನ ನಡೆಯೇನು ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ಜನರು ಮಾಡುವುದು ಸರಿಯಾಗಿರುತ್ತದೆ" ಎಂದು ಉತ್ತರಿಸಿದ್ದಾರೆ.
"ನಮಗೆ ಇದು ಹೋರಾಟ ನಡೆಸುವ ಸಮಯ. ನಾವು ಹೋರಾಡಲೇಬೇಕಾಗಿದೆ" ಎಂದಿದ್ದಾರೆ.