ಚಿಕ್ಕಬಳ್ಳಾಪುರ, ಫೆ 13 (Daijiworld News/MB) : ಸರ್ಕಾರ ಬೇಡಿಕೆಗಳನ್ನು ಈಡೇರಿಕೆ ಮಾಡಲು ಸಿದ್ಧವಾಗಿದ್ದರೂ ಇಂದು ಕರ್ನಾಟಕ ಬಂದ್ ಆಚರಣೆ ಮಾಡುವ ಅವಶ್ಯಕತೆ ಏನಿತ್ತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಪ್ರಶ್ನಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ತಾಂಡ್ರಮರದಹಳ್ಳಿ ಗ್ರಾಮದಲ್ಲಿ ಗುರುವಾರ ಅಮೃತ ಭವನ ಉದ್ಘಾಟಿಸಲು ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಂದ್ನಿಂದಾಗಿ ಸಮಾಜಕ್ಕೆ ಒಂದು ಹೊರೆ, ರಾಜಕೀಯ ಕಾರಣಗಳಿಗಾಗಿ ಇಂದಿನ ಬಂದ್ ಮಾಡಲಾಗುತ್ತಿದೆ. ಇದರಿಂದಾಗಿ ಜನರಿಗೆ ಬಹಳ ಕಷ್ಟ -ನಷ್ಟವಾಗುಗುತ್ತದೆ ಎಂದರು.
ಅಷ್ಟು ಮಾತ್ರವಲ್ಲದೇ ರೈತರಿಗೆ, ರೋಗಿಗಳಿಗೆ ತುಂಬಾ ತೊಂದರೆಯಾಗುತ್ತದೆ. ಪ್ರಭುದ್ದ ರಾಜಕಾರಣಿಗಳು ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.
ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಲು ಸರ್ಕಾರವು ಸಿದ್ದವಾಗಿದೆ. ಆದರು ಪದೇ ಪದೇ ಭಾರತ್ ಬಂದ್, ಕರ್ನಾಟಕ ಬಂದ್ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.