ಕೊಲ್ಕತ್ತಾ, ಫೆ 13 (Daijiworld News/MB) : ಬ್ಯಾಂಕಾಕ್ನಿಂದ ಇಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತರರಾಷ್ಟ್ರೀಯ (ಎನ್ಎಸ್ಸಿಬಿಐ) ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಬ್ಬರು ಪ್ರಯಾಣಿಕರಲ್ಲಿ ಕೊರೋನಾ ವೈರಸ್ ಇದೆ ಎಂದು ಶಂಕಿಸಲಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಕೊರೋನಾ ವೈರಸ್ ತನ್ನ ಕರಾಳ ಹಸ್ತವನ್ನು ಪ್ರಪಂಚದಾದ್ಯಂತ ಚಾಚಿದ್ದು ಭಾರತವನ್ನು ಸೇರಿಸಿ ಒಟ್ಟು ೨೪ ದೇಶಗಳಲ್ಲಿ ಪತ್ತೆಯಾಗಿದೆ.
ಚೀನಾದಲ್ಲಿ ಸುಮಾರು 14,840 ಜನರಿಗೆ ಸೋಂಕು ತಗಲಿದೆ ಎಂದು ಶಂಕಿಸಲಾಗಿದೆ.