ನವದೆಹಲಿ, ಫೆ 13 (DaijiworldNews/SM): ರಾಷ್ಟ್ರ ರಾಜಧಾನಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿಗೆ ಹೀನಾಯ ಸೋಲಾಗಿದೆ. ಆದರೆ, ಇದೀಗ ಸೋಲಿಗೆ ಕಾರಣವನ್ನು ಗೃಹ ಸಚಿವರು ತಿಳಿಸಿದ್ದಾರೆ.
ದೆಹಲಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಬಿಜೆಪಿ ನಾಯಕರು ನೀಡಿದ ವಿವಾದಾತ್ಮಕ ಹೇಳಿಕೆಗಳೇ ಪಕ್ಷದ ಸೋಲಿಗೆ ಕಾರಣವಾಗಿದೆ. "ಗೋಲಿ ಮಾರೋ" ಎಂಬ ಬಿಜೆಪಿ ಮುಖಂಡರ ಹೇಳಿಕೆ ಮತ್ತು ಇಂಡೋ-ಪಾಕಿಸ್ತಾನದ ಬಗ್ಗೆ ಮಾತುಕತೆಯೇ ಪಕ್ಷಕ್ಕೆ ದೊಡ್ಡ ಹೊಡೆತವನ್ನು ತಂದುಕೊಟ್ಟಿದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ತನ್ನದೇಯಾದ ಒಂದು ಸಿದ್ದಾಂತವನ್ನು ಹೊಂದಿರುವ ಪಕ್ಷವಾಗಿದೆ. ಸೋಲು-ಗೆಲುವು ಏನೇ ಬಂದರೂ ಪಕ್ಷದ ಸಿದ್ದಾಂತದಲ್ಲಿ ಯಾವುದೇ ಬದಲಾವಣೆಯಾಗದು. ದೇಶದಲ್ಲಿ ಎದುರಾಗುವ ಚುನಾವಣೆಗಳು ಪಕ್ಷಗಳ ಸಿದ್ದಾಂತವನ್ನು ಪ್ರಚುರಪಡಿಸುವ ವೇದಿಕೆಗಳಾಗಿವೆ. ನಾನು ಪಕ್ಷದ ಮುಖಂಡನಾಗಿದ್ದುಕೊಂಡು ಪಕ್ಷ ಸಂಘಟನೆ ಹಾಗೂ ಮುನ್ನಡೆಸುವ ಕೆಲಸ ಮಾಡಿದ್ದೇನೆ ಎಂದರು.