ಹೊಸಪೇಟೆ, ಫೆ 14 (Daijiworld News/MB) : ಹೊಸಪೇಟೆಯಲ್ಲಿ ನಡೆದ ಅಪಘಾತದಲ್ಲಿ ಕಂದಾಯ ಸಚಿವ ಆರ್.ಅಶೋಕ ಅವರ ಪುತ್ರ ಶರತ್ ಕೂಡಾ ಆರೋಪಿ ಎಂದು ಪ್ರತಿಪಕ್ಷಗಳು ದೂರುತ್ತಿರುವ ಬೆನ್ನಲ್ಲೇ ಪೊಲೀಸರು ಈ ಅಪಘಾತ ನಡೆದ ಕಾರಿನಲ್ಲಿ ಶರತ್ ಇರಲಿಲ್ಲ ಎಂದು ಹೇಳಿದ್ದಾರೆ.
ಈ ಅಪಘಾತ ಘಟನೆಯಲ್ಲಿ ಸಚಿವರ ಪುತ್ರ ಭಾಗಿಯಾಗಿದ್ದಾನೆ ಎಂಬ ಊಹಾಪೋಹಗಳಿವೆ. ಆದರೆ ಸಚಿವರ ಪುತ್ರ ಅಲ್ಲಿ ಇರಲಿಲ್ಲ ಎಂದು ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಐಎಎನ್ಎಸ್ಗೆ ತಿಳಿಸಿದ್ದಾರೆ.
ಬೆಂಝ್ ಕಾರು ಗುದಿದ ಪರಿಣಾಮದಿಂದಾಗಿ ಗ್ರಾಮಸ್ಥರಾದ ರವಿ ನಾಯಕ್ (19) ಮತ್ತು ಸಚಿನ್ ಎಂಬವರು ಮೃತರಾಗಿದ್ದಾರೆ.
ಕಾರು ಚಲಾಯಿಸುತ್ತಿದ್ದ ರಾಹುಲ್ (29) ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು ಅವರನ್ನು ಶುಕ್ರವಾರ (ರಾಹುಲ್) ಬಂಧಿಸುತ್ತೇವೆ ಎಂದು ಎಸ್ಪಿ ತಿಳಿಸಿದ್ದಾರೆ.
ಕಾರಿನಲ್ಲಿ ರಾಕೇಶ್, ಶಿವ ಕುಮಾರ್ ಮತ್ತು ವರುಣ್ ಇದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಆದರೆ ಅಪಘಾತ ಸಂಭವಿಸಿದ ಮೂರು ದಿನವಾದರೂ ಈ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಲು ವಿಫಲರಾಗಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹೆಸರಿನಲ್ಲಿ ನೋಂದಾಯಿಸಲ್ಪಟ್ಟ ಈ ಕಾರು ಹಂಪಿಯಿಂದ ಹಿಂದಿರುಗುತ್ತಿತ್ತು.
ಈ ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಸ್ಥಳೀಯರ ಪ್ರಕಾರ ಆರ್ ಅಶೋಕ್ ಮಗ ಕುಡಿದು ವಾಹನ ಚಲಾಯಿಸುತ್ತಿದ್ದ, ಮಗನ ಬಗ್ಗೆ ಆರ್ ಅಶೋಕ್ ನಿರುತ್ತರ, ಆರ್ ಅಶೋಕ್ ಮಗ ಕಾರಿನಲ್ಲಿ ಇರಲಿಲ್ಲ ಎಂದು ಪೊಲೀಸರು ತನಿಖೆ ಮಾಡದೆಯೇ ಕ್ಲೀನ್ ಚಿಟ್ ನೀಡಿದ್ದಾರೆ. ಮಧ್ಯರಾತ್ರಿಯಲ್ಲೇ ತರಾತುರಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ವೈದ್ಯರ ಹೇಳಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರದಿಂದ ಮೃತ ಅಮಾಯಕರಿಗೆ ನ್ಯಾಯ ದೊರಕುವುದೇ?" ಎಂದು ಪ್ರಶ್ನಿಸಿದ್ದಾರೆ.
ಅಪಘಾತದ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯ ಮಾಡಿದೆ.