ನವದೆಹಲಿ, ಫೆ 14 (Daijiworld News/MB) : ಇಂದು ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆದು ಒಂದು ವರ್ಷವಾಗಿದ್ದು ಈ ಕುರಿತಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಈ ಕುರುತಾಗಿ ಟ್ವೀಟ್ ಮಾಡಿದ ಅವರು, ಪುಲ್ವಾಮ ದಾಳಿಯಲ್ಲಿ ಹಿತಾತ್ಮರಾದ ಯೋಧರಿಗೆ ಗೈರವ ಸಲ್ಲಿಸಿದ್ದಾರೆ ಹಾಗೂ ಈ ಘಟನೆಯ ವಿಚಾರಣೆಯ ಕುರಿತಾಗಿ ಪ್ರಶ್ನಿಸಿ ಸರ್ಕಾರದ ಭದ್ರತಾ ಕೊರತೆಯೇ ಈ ದಾಳಿಗೆ ಕಾರಣ ಎಂದು ಆರೋಪಿಸಿದ್ದಾರೆ.
ಇಂದು ನಾವು ಪುಲ್ವಾಮಾ ದಾಳಿಯಿಂದ ದಾಳಿಯಿಂದ ಹುತಾತ್ಮರಾದ 40 ಸಿಆರ್ಪಿಎಫ್ ಹುತಾತ್ಮರನ್ನು ಸ್ಮರಿಸುತ್ತೇವೆ. ಈ ಸಂದರ್ಭದಲ್ಲಿ ನಾವು ಪ್ರಶ್ನಿಸೋಣ ಎಂದು ಹೇಳಿದ್ದಾರೆ.
ಈ ಪುಲ್ವಾಮ ದಾಳಿಯಿಂದಾಗಿ ಯಾರಿಗೆ ಹೆಚ್ಚಿನ ಲಾಭವಾಗಿದೆ? ದಾಳಿಯ ತನಿಖೆಯ ಫಲಿತಾಂಶವೇನು? ಈ ದಾಳಿಗೆ ಕಾರಣವಾದ ಭದ್ರತಾ ಕೊರತೆಗೆ ಬಿಜೆಪಿ ಸರ್ಕಾರದ ಯಾರು ಹೊಣೆಗಾರರು? ಎಂದು ಅವರು ಪ್ರಶ್ನಿಸಿದ್ದಾರೆ.
2019ರ ಫೆ. 14ರಂದು ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರಿದ್ದ ಬಸ್ ಮೇಲೆ ಜೈಷ್ ಏ ಮೊಹಮದ್ ಸಂಘಟನೆ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಘಟನೆಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.