ಬೆಂಗಳೂರು, ಫೆ 14 (Daijiworld News/MB) : ಕರ್ನಾಟಕ ಬಿಜೆಪಿಯ ಟ್ವಿಟರ್ ಖಾತೆ ಕೆಲವು ಗಂಟೆಗಳವರೆಗೂ ಬ್ಲಾಕ್ ಆಗಿದ್ದು ಈ ಹಿನ್ನಲೆಯಲ್ಲಿ ಪ್ರಗತಿಪರರ ಕುರಿತು ಸತ್ಯ ಹೇಳಿದ್ದರಿಂದ' ಸಾಮಾಜಿಕ ಮಾಧ್ಯಮ ಟ್ವಿಟರ್ ತಮ್ಮ ಖಾತೆಯನ್ನು ನಿರ್ಬಂಧಿಸಿತ್ತು ಎಂದು ಕರ್ನಾಟಕ ಬಿಜೆಪಿ ದೂರಿದೆ.
ಫೆ.11 ರಂದು ಕೆಲವು ಗಂಟೆಗಳು ಟ್ವಿಟರ್ ಖಾತೆಗೆ ಅಡಚಣೆ ಎದುರಾಗಿತ್ತು ಎಂದು ತಿಳಿದು ಬಂದಿದೆ ಎಂದು ಮಾದ್ಯಮದ ವರದಿ ತಿಳಿಸಿದೆ.
ಬಿಜೆಪಿ ಕರ್ನಾಟಕ ಟ್ವಿಟರ್ ಖಾತೆಯ ಟೈಮ್ಲೈನ್ನಲ್ಲಿ ಫೆ.10, ರಾತ್ರಿ 9:55 ರ ಬಳಿಕ ಯಾವುದೇ ಟ್ವೀಟ್ ಕಂಡು ಬಂದಿರಲಿಲ್ಲ. ಫೆ.12ರಿಂದ ಮತ್ತೆ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, "ಪ್ರಿಯ ಸ್ನೇಹಿತರೇ, ಪ್ರಗತಿಪರರ ಕುರಿತು ಸತ್ಯ ಹೇಳಿದ ಕಾರಣದಿಂದಾಗಿ ನಮ್ಮ ಖಾತೆಯನ್ನು ಟ್ವಿಟರ್ ನಿರ್ಬಂಧಿಸಿದ್ದು ದುರದೃಷ್ಟಕರ ಸಂಗತಿ. ನಾವು ಸಾರ್ವಜನಿಕವಾಗಿ ಸತ್ಯವನ್ನು ತೆರೆದಿಡುವ ನಮ್ಮ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ. ನೀವು ನೀಡಿದ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ನಮನಗಳು. ಸತ್ಯಮೇವ ಜಯತೇ! ಜೈ ಹಿಂದ್" ಎಂದು ಹೇಳಿದೆ.
ಟ್ವಿಟರ್ ಬಿಜೆಪಿಯು ನಿಯಮ ಉಲ್ಲಂಘನೆ ಮಾಡಿದ ಕಾರಣ ನೀಡಿ, ಫೆ.10ರಂದು ಬಿಜೆಪಿ ಕರ್ನಾಟಕ ಮಾಡಿದ್ದ ಟ್ವೀಟ್ವೊಂದನ್ನು ತೆಗೆದು ಹಾಕಿದೆ.