ಅಹಮದಾಬಾದ್, ಫೆ 15 (Daijiworld News/MB) : ಪ್ರೇಮಿಗಳ ದಿನದಂದು ಪಾರ್ಕ್ಗಳಲ್ಲಿ ತಿರುಗಾಡುತ್ತಿದ್ದ ಯುವತಿ, ಯುವಕರನ್ನು ಭಜರಂಗದಳದ ಕಾರ್ಯಕರ್ತರು ಓಡಿಸಿಕೊಂಡು ಹೋಗಿರುವ ಘಟನೆ ಗುಜುರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಭಜರಂಗದಳದ ಕಾರ್ಯಕರ್ತರು ಮೂರು ಗುಂಪುಗಳಾಗಿ ಮಾಡಿಕೊಂಡು ಕೇಸರಿ ಶಾಲು ಹಾಕಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಬೈಕ್ನಲ್ಲಿ ಬಂದು ವಾಡಜ್ ಮತ್ತು ಉಸ್ಮಾನ್ಪುರದಲ್ಲಿ ರಿವರ್ ಫ್ರಂಟ್ನಲ್ಲಿ ಕುಳಿತಿದ್ದ ಪ್ರೇಮಿಗಳಿಗೆ ಬೆದರಿಕೆ ಹಾಕಿ ಓಡಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಭಜರಂಗದಳದ ಉಪಾಧ್ಯಕ್ಷ ನಿಕುಂಜ್ ಪರೇಖ್, "ನಾವು ನಮ್ಮ ಭಾರತೀಯ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವ ಬೀರಲು ಬಿಡುವುದಿಲ್ಲ. ಈ ಪ್ರೇಮಿಗಳ ದಿನಾಚರಣೆ ಎಂಬುವುದು ಪಾಶ್ಚಿಮಾತ್ಯ ಸಂಸ್ಕೃತಿಯಾಗಿದೆ. ಅದೂ ಅಲ್ಲದೇ ಲವ್ ಜಿಹಾದ್ ಹೆಚ್ಳು ಇದು ಕಾರಣವಾಗಿದೆ. ಈ ಕಾರಣಕ್ಕಾಗಿ ನಾವು ಇದನ್ನು ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರೇಮಿಗಳ ದಿನಾಚರಣೆ ಆಚರಣೆ ಬಳಿಕ ಹಿಂದೂ ಯುವತಿಯರು ಬೇರೆ ಧರ್ಮದ ಯುವಕರೊಂದಿಗೆ ಓಡಿಹೋಗಿ ಮದುವೆಯಾಗುವ ಪ್ರಕರಣಗಳು ಜಾಸ್ತಿಯಾಗಿವೆ. ಈ ಹಿನ್ನಲೆಯಲ್ಲಿ ಬಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧ ಮಾಡುತ್ತದೆ ಎಂದರು.
ಹಲವು ಯುವಕರು ಬಜರಂಗದಳದ ಈ ಕಾರ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, "ಎಲ್ಲರಿಗೂ ಅವರದ್ದೇ ಆದ ವೈಯಕ್ತಿಕ ಜೀವನವಿದೆ. ಅವರಿಗೆ ಇಷ್ಟವಾದ ರೀತಿ ಅವರು ಬದುಕುತ್ತಾರೆ. ಅದು ಅವರ ಹಕ್ಕು. ಅದನ್ನು ಪ್ರಶ್ನಿಸಲು ಇವರು ಯಾರು? ಸಂಸ್ಕೃತಿ ಹೆಸರಿನಲ್ಲಿ ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.