ಅಮರಾವತಿ, ಫೆ 15 (Daijiworld News/MB) : ಪ್ರೇಮಿಗಳ ದಿನವಾದ ಫೆ.14 ರಂದು ಮಹಿಳಾ ಕಾಲೇಜುಗಳ ವಿದ್ಯಾರ್ಥಿನಿಯರು ಪ್ರೇಮ ವಿವಾಹ ಪರಿಕಲ್ಪನೆಯ ವಿರುದ್ಧ ಪ್ರತಿಜ್ಞೆ ಸ್ವೀಕಾರ ಮಾಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಅಮರಾವತಿಯ ಚಂದೂರ್ ರೈಲ್ವೆ ಸಿಲ್ದಾಣದ ಬಳಿಯಿರುವ ಮಹಿಳಾ ಕಲಾ ಹಾಗೂ ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿಯರು ಮರಾಠಿ ಭಾಷೆಯಲ್ಲಿ ನಾವು ಯಾರನ್ನೂ ಪ್ರೀತಿ ಮಾಡುವುದಿಲ್ಲ. ಯಾರೊಂದಿಗೂ ಪ್ರೀತಿಯ ವ್ಯವಹಾರವಾಗಲಿ ಅಥವಾ ಪ್ರೇಮ ವಿವಾಹವಾಗಲಿ ಆಗುವುದಿಲ್ಲ ಎಂದು ವಿದ್ಯಾರ್ಥಿನಿಯರು ಪ್ರತಿಜ್ಞೆ ಸ್ವೀಕಾರ ಮಾಡಿದ್ದಾರೆ.
ನಾನು ಸಂಪೂರ್ಣವಾಗಿ ಹೆತ್ತವರ ಮೇಲೆ ನಂಬಿಕೆ ಇರಿಸುವುದಾಗಿ ಪ್ರತಿಜ್ಞೆ ಮಾಡಿದ್ದೇನೆ. ಯಾರನ್ನೂ ಪ್ರೀತಿ ಮಾಡುವುದಿಲ್ಲ, ಪ್ರೇಮ ವಿವಾಹವಾಗುವುದಿಲ್ಲ. ಹಾಗೆಯೇ ವರದಕ್ಷಿಣೆ ಕೇಳುವವರನ್ನು ಕೂಡಾ ವಿವಾಹವಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೇನೆ ಎಂದು ಕಾಲೇಜಿನ ವಿದ್ಯಾರ್ಥಿನಿ ತಿಳಿಸಿದ್ದಾರೆ.
ನಾವು ಯಾರನ್ನೇ ಪ್ರೀತಿ ಮಾಡಿದರು ಅವರೇ ನಮಗೆ ಉತ್ತಮವಾಗಿರಬೇಕು. ಸ್ವಾವಲಂಬಿಯಾಗಿರವೇಕು, ಪ್ರೀತಿಯ ವಿಚಾರದಲ್ಲಿ ಕುಟುಂಬದವರ ಸಲಹೆ ಪಡೆಯುವುದು ಎಂದಿಗೂ ಉತ್ತಮ ಎಂದು ವಿದ್ಯಾರ್ಥಿನಿ ರಿತಿಕಾ ಹೇಳಿದ್ದಾರೆ.