ಹುಬ್ಬಳ್ಳಿ, ಫೆ 15 (Daijiworld News/MB) : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮೊದಲು ಅವರ ಪಕ್ಷದಿಂದ ವಿರೋಧ ಪಕ್ಷದ ನಾಯಕರೆಂದು ಘೋಷಣೆ ಮಾಡಿಸಿಕೊಳ್ಳಲಿ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸಿದ್ಧರಾಮಯ್ಯ ಅವರಿಗೆ ಸವಾಲ್ ಹಾಕಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಮಾತನಾಡಿ, "ಸಿದ್ದರಾಮಯ್ಯ ಅವರಿಗೆ ಎಸಿಬಿ ಲೋಕಾಯುಕ್ತದ ಬಗ್ಗೆ ಮಾತನಾಡಲು ಯವುದೇ ನೈತಿಕತೆ ಇಲ್ಲದಾಗಿದೆ. ತಮ್ಮ ನೈತಿಕತೆಯನ್ನು ಮರೆತು ಸಿದ್ದರಾಮಯ್ಯ ಎಸಿಬಿ ಸ್ಥಾಪನೆ ಮಾಡಿದರು. ಅವರಿಗೆ ನಿಜವಾಗಿಯೂ ನೈತಿಕತೆ ಇದ್ದಿದ್ದರೆ ಅವರು ಸಿಎಂ ಆಗಿದ್ದ ವೇಳೆಯೇ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಬಲ ತುಂಬಬೇಕಾಗಿತ್ತು" ಎಂದು ಅಭಿಪ್ರಾಯಪಟ್ಟರು.
ಹಾಗೆಯೇ ಸಿದ್ದರಾಮಯ್ಯ ಅವರು ಸದನದಲ್ಲಿ ಎಸಿಬಿ, ಲೋಕಾಯುಕ್ತದ ಬಗ್ಗೆ ಮಾತನಾಡಲಿ. ಆಗ ಅಲ್ಲಿ ನಾವು ಉತ್ತರಿಸುತ್ತವೆ. ಮೊದಲು ಅವರು ವಿಪಕ್ಷ ನಾಯಕನೆಂದು ಘೋಷಣೆ ಮಾಡಿಸಿಕೊಳ್ಳಲಿ. ಆ ನಂತರ ಬಿಜೆಪಿ, ಸಿಎಂ ಯಡಿಯೂರಪ್ಪ ಮತ್ತು ಪ್ರಧಾನ ಮಂತ್ರಿ ಮೋದಿ ಬಗ್ಗೆ ಮಾತನಾಡಲಿ ಎಂದರು.