ಚಿಕ್ಕಮಗಳೂರು, ಜ 15 (DaijiworldNews/SM): ನಟ ಸುದೀಪ್ ಮಾಲಕತ್ವದ “ಕಿಚ್ಚ ಕ್ರಿಯೇಷನ್ಸ್’ ವಿರುದ್ಧದ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.
ಚಿಕ್ಕಮಗಳೂರು ತಾಲೂಕಿನ ಆಲ್ದೂರು ವ್ಯಾಪ್ತಿಯ ಬೈಗೂರಿನಲ್ಲಿ ದೀಪಕ್ ಮಯೂರ್ ಪಾಟೀಲ್ ಮಾಲಕತ್ವದ ದೊಡ್ಮನೆ ಎಸ್ಟೇಟ್ನಲ್ಲಿ 2014ರಲ್ಲಿ 30 ದಿನಗಳ ಕಾಲ “ವಾರಸ್ದಾರ’ ಧಾರಾವಾಹಿಯ ಚಿತ್ರೀಕರಣ ನಡೆಸಲಾಗಿತ್ತು. ಈ ಚಿತ್ರೀಕರಣದ ವೇಳೆ ಕಾಫಿ ತೋಟ, ಅಡಿಕೆ ಮರಗಳನ್ನು ಕಡಿದು ನಾಶ ಮಾಡಲಾಗಿದೆ ಮತ್ತು ಬಾಡಿಗೆ ಬಾಕಿ ಹಣ ನೀಡಿಲ್ಲವೆಂದು ಕಾಫಿ ತೋಟದ ಮಾಲಕರು ನಟ ಸುದೀಪ್ ವಿರುದ್ಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಹೈಕೋರ್ಟ್ ಮೇಟ್ಟಿಲೇರಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ವಜಾಗೊಳಿಸಿದೆ ಎಂದು ಸುದೀಪ್ ಪರ ವಕೀಲ ಗೋಪಿ ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.