ನವದೆಹಲಿ, ಫೆ 16 (Daijiworld News/MB) : ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಭರ್ಜಿರಿ ಜಯ ಸಾಧಿಸಿದ ಅರವಿಂದ ಕೇಜ್ರಿವಾಲ್ ಇಂದು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು ಈ ಕಾರ್ಯಕ್ರಮಕ್ಕೆ 50 ಮಂದಿ ವಿಶೇಷ ಅತಿಥಿಗಳನ್ನು ಆಹ್ವಾನ ಮಾಡಲಾಗಿದೆ.
ದೆಹಲಿ ನಿರ್ಮಾಣಕ್ಕೆ ಕಾರಣವಾದ ಸುಮಾರು 50 ಮಂದಿ ಪ್ರಮುಖರನ್ನು ಕೇಜ್ರಿವಾಲ್ ಆಹ್ವಾನ ಮಾಡಿದ್ದು ಇಂದು ಅವರೊಂದಿಗ ವೇದಿಕೆ ಹಂಚಿಕೊಳ್ಳಲಿದ್ದಾರೆ.
ವಿಶೇಷ ಆಹ್ವಾನಿತರಾದ ದೆಹಲಿಯ ಪ್ರಸಿದ್ಧ ಸಿಗ್ನೇಚರ್ ಬ್ರಿಡ್ಜ್ ನ ವಿನ್ಯಾಸಕಾರರು, ಶಿಕ್ಷಕರು, ಬಸ್ ಮಾರ್ಷಲ್ಗಳು, ಕಂಡಕ್ಟರ್, ಅಗ್ನಿಶಾಮಕ ದಳದ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡವರ ಕುಟುಂಬ ವರ್ಗ, ಆಟೋರಿಕ್ಷಾ ಚಾಲಕರು, ರೈತರು, ಅಂಗನವಾಡಿ ನೌಕರರು, ಕ್ರೀಡಾಪಟುಗಳು, ಐಐಟಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಪಿಡಬ್ಲ್ಯೂಡಿ ಎಂಜಿನಿಯರ್ಗಳು ಸೇರಿದಂತೆ ಒಟ್ಟಾರೆ ಸುಮಾರು 50 ಮಂದಿ ಈ ಕಾರ್ಯಕ್ರಮದಲ್ಲಿ ಇರಲಿದ್ದಾರೆ.
ಹಾಗೆಯೇ ಇಂದು ಕೇಜ್ರಿವಾಲ್ ಜೊತೆಯ ಮನೀಶ್ ಸಿಸೋಡಿಯಾ, ಸತ್ಯೇಂದರ್ ಜೈನ್, ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೈನ್ ಮತ್ತು ರಾಜೇಂದ್ರ ಗೌತಮ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಬಾರಿಯ ಸಮಾರಂಭದ ಕೇಂದ್ರಬಿಂದುವಾಗಿ ದೆಹಲಿ ಚುನಾವಣೆ ಫಲಿತಾಂಶ ದಿನ ಆಪ್ ಕೇಂದ್ರ ಕಚೇರಿ ಬಳಿ ಎಲ್ಲರ ಗಮನ ಸೆಳೆದಿದ್ದ ಚೋಟಾ ಮಫ್ಲರ್ಮ್ಯಾನ್ ಎಂದೇ ಪ್ರಸಿದ್ಧಿ ಪಡೆದಿದ್ದ ಒಂದು ವರ್ಷದ ಅವ್ಯಾನ್ ಯಥಾವತ್ ಇರಲಿದ್ದಾರೆ. ಅರವಿಂದ ಕೇಜ್ರಿವಾಲ್ ಕಾರ್ಯಕ್ರಮಕ್ಕೆ ಆಗಮಿಸುವಂತೆ ಅವ್ಯಾನ್ ಯಥಾವತ್ ಪೋಷಕರಿಗೆ ವಿಶೇಷ ಆಹ್ವಾನ ನೀಡಲಾಗಿದೆ. ತೀರ ಸರಳ ಕಾರ್ಯಾಕ್ರಮಕ್ಕೆ ಆಪ್ ಸಿದ್ಧತೆ ನಡೆಸಿದೆ.