ಲಕ್ನೋ, ಫೆ 16 (Daijiworld News/MB) : ಮೊರಾದಾಬಾದ್ ಜಿಲ್ಲಾಡಳಿತ ಕವಿ ಹಾಗೂ ರಾಜಕಾರಿಣಿಯಾಗಿರುವ ಇಮ್ರಾನ್ ಪ್ರತಾಪ್ಗರ್ಹಿಗೆ ನೋಟಿಸ್ ಕಳುಹಿಸಿದ್ದು ಜನವರಿ 29ರಿಂದ ನಗರದಲ್ಲಿ ಪೌರತ್ವ ಕಾಯ್ದೆ(ಸಿಎಎ) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿ ನಿಮ್ಮಿಂದ 1.04 ಕೋ.ರೂ.ವಶಪಡಿಸಿಕೊಳ್ಳುವುದಾಗಿ ತಿಳಿಸಿದೆ. ಪ್ರತಿಭಟನೆಯ ವೇಳೆ ನಿಯೋಜಿಸಲಾಗಿದ್ದ ಪೊಲೀಸ್ ಭದ್ರತಾ ಸಿಬ್ಬಂದಿಗಳ ಪ್ರತಿದಿನದ ಖರ್ಚುವೆಚ್ಚವನ್ನು ಆಧರಿಸಿ ಲೆಕ್ಕ ಹಾಕಲಾಗಿದೆ ಎಂದು ನೊಟೀಸ್ನಲ್ಲಿ ತಿಳಿಸಲಾಗಿದೆ.
ಸೆಕ್ಷನ್ ೧೪೪ ಜಾರಿಯಿದ್ದರೂ ನೀವು ಕರೆ ನೀಡಿದ್ದರಿಂದ ನಿರ್ದಿಷ್ಟ ಸಮುದಾಯಕ್ಕೆ ಸೇರಿದ ದೊಡ್ಡ ಗುಂಪು ಈದ್ಗಾ ಮೈದಾನದಲ್ಲಿ ನೆರೆದಿತ್ತು.ಈ ಸಂದರ್ಭದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ದೃಷ್ಟಿಯಿಂದ ಆರ್ಎಸ್ಎಫ್ನ ಒಂದು ಹೆಚ್ಚುವರಿ ಪ್ಲಾಟೂನ್, ಪಿಎಸಿಯನ್ನು ನಿಯೋಜನೆ ಮಾಡಲಾಗಿದೆ. ಈ ಭದ್ರತಾ ಸಿಬ್ಬಂದಿಗಳ ಪ್ರತಿದಿನದ ಖರ್ಚು ೧೩.೪೨ ಲಕ್ಷ ರೂ.ಯಾಗಿದ್ದು ನಿಮ್ಮಿಂದ ಜಿಲ್ಲಾಡಳಿತ ೧.೦೪ ಕೋ.ರೂ.ಯನ್ನು ವಶಕ್ಕೆ ಒಪಡೆದುಕೊಳ್ಳಲಿದೆ ಎಂದು ಹೆಚ್ಚುವರಿ ನಗರ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್ ನೀಡಿದ ನೊಟೀಸ್ನಲ್ಲಿ ತಿಳಿಸಲಾಗಿದೆ.
ಈ ನೋಟಿಸ್ನನ್ನು ಇಮ್ರಾನ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ಸ್ಥಳಕ್ಕೆ ತಲುಪಲಿದ್ದ ಒಂದು ದಿನದ ಮೊದಲು ಫೆ. ೬ ರಂದು ನೀಡಲಾಗಿದ್ದು ಇಮ್ರಾನ್ ಫೆ. ೭ ರಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಜನತೆ ಅಧಿಕಾರಿಗಳ ವಿರುದ್ಧವಾಗಿ ಮಾತಾನಾಡುವುದನ್ನು ಉತ್ತರಪ್ರದೇಶ ಸರ್ಕಾರ ಇಚ್ಛಿಸುವುದಿಲ್ಲ. ನಾನು ಫೆ. ೭ ಕ್ಕಿಂತ ಸಾಕಷ್ಟು ಮೊದಲೇ ಮಿರಾದಾಬಾದ್ಗೆ ಭೇಟಿ ನೀಡಿದ್ದೆ. ಅಲ್ಲಿ ಯಾವುದೇ ಕಾನೂನು ಸುವ್ವವಸ್ಥೆಯ ಸಮಸ್ಯೆಯಿಲ್ಲ. ನಮ್ಮನ್ನು ಗುರಿ ಮಾಡುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಜಿಲ್ಲಾಡಳಿತ ಪ್ರತಿಭಾಟನಾಕಾರರನ್ನು ಬೆದರಿಸಲು ಬೇರೆ ಬೇರೆ ಪ್ರಯತ್ನ ಮಾಡಿತ್ತು. ಆದರೆ ನಾವು ಹೆದರಲಿಲ್ಲ. ನಾನು ಫೆ.೭ ರಂದು ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿದ್ದೇನೆ. ನನ್ನ ಭಾಷಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಯಾವುದೇ ಪದಗಳನ್ನು ನಾನು ಪ್ರಸ್ತಾವಣೆ ಮಾಡಿಲ್ಲ. ಈ ನೋಟಿಸ್ ವಿರುದ್ಧವಾಗಿ ನಾನು ನ್ಯಾಯಾಲಯದ ಮೆಟ್ಟಿಳೇರುತ್ತೇನೆ ಎಂದು ಇಮ್ರಾನ್ ತಿಳಿಸಿದ್ದಾರೆ.