ವಿಜಯಪುರ, ಫೆ.16 (DaijiworldNews/PY): "ಹುಬ್ಬಳ್ಳಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ದೇಶದ್ರೋಹಿ ವಿದ್ಯಾರ್ಥಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಪಾಕಿಸ್ತಾನ ಪರ ಘೋಷಣೆ ಕೂಗುವ ದೇಶದ್ರೋಹಿಗಳಿಗೆ ನಮ್ಮಲ್ಲಿ ನೀಡಲಾಗುವ ಶಿಕ್ಷಣ ಸೌಲಭ್ಯವನ್ನು ಹಿಂಪಡೆಯಬೇಕು. ಪಾಕಿಸ್ತಾನ ಗಡಿಯಲ್ಲಿ ಬಿಡಬೇಕು. ಭಾರತದ ಅನ್ನ, ನೀರು, ಗಾಳಿ ಶಿಕ್ಷಣ ಪಡೆದು ಪಾಕಿಸ್ತಾನ ಪರ ಘೋಷಣೆ ಕೂಗುವವರಿಗೆ ಇಲ್ಲಿ ನೀಡಿರುವ ಎಲ್ಲಾ ಸೌಲಭ್ಯ ಹಿಂಪಡೆಯಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ತಿಳಿಸಿದರು.