ಲಕ್ನೋ, ಫೆ 16 (Daijiworld News/MB) : ವಾರಾಣಾಸಿಯಲ್ಲಿ ಆಯೋಜಿಸಲಾಗಿದ್ದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆವಗವಹಿಸಿದ ಪ್ರಧಾನಿ ಮೋದಿ ಕನ್ನಡದಲ್ಲಿ ಮಾತನಾಡಿದ್ದಾರೆ.
ಜಂಗಮವಾಡಿ ಮಠಕ್ಕೆ ಮೋದಿ, ಯಡಿಯೂರಪ್ಪ ಹಾಗೂ ಯೋಗಿ ಆದಿತ್ಯನಾಥ್ ಹಾಗೂ ಇತರೆ ಗಣ್ಯರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಮೋದಿ ಪವಿತ್ರ ಗ್ರಂಥ ’ಸಿದ್ಧಾಂತ ಶಿಖಾಮಣಿ ಯ ಕುರಿತಾಗಿ ಮಾತನಾಡಿದರು. ಎಲ್ಲರಿಗೂ ನಮಸ್ಕಾರಗಳು, ವೇದಿಕೆ ಮೇಲಿರುವ ವೀರಶೈವ ಜಗದ್ಗುರುಗಳಿಗೆ ನಮಸ್ಕಾರಗಳು ಎಂದು ಕನ್ನಡದಲ್ಲಿ ಹೇಳಿ ತಮ್ಮ ಭಾಷಣವನ್ನು ಆರಂಭ ಮಾಡಿದ್ದಾರೆ.
ಮೋದಿ ಅವರು ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ವೇದಿಕೆ ಮುಂದೆ ಕುಳಿತಿದ್ದವರು ಜೋರಾಗಿ ಚಪ್ಪಾಳೆ ಕಟ್ಟಿ ಮೋದಿ, ಮೋದಿ ಎಂದು ಜೈಕಾರ ಹಾಕಿದರು. ಭಾಷಣದ ಕೊನೆಯಲ್ಲಿ ಕನ್ನಡದಲ್ಲಿ ನಿಮಗೆಲ್ಲರಿಗೂ ನನ್ನ ಅನಂತ ವಂದನೆಗಳು ಎಂದು ಹೇಳಿ ಮೋದಿ ತಮ್ಮ ಮಾತನ್ನು ಮುಗಿಸಿದರು.
ಈ ಸಮಾರಂಭದಲ್ಲಿ ಪ್ರಧಾನಿ ಮೋದಿಯವರು 18 ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಭಾಷಾಂತರಗೊಂಡ ವೀರಶೈವ ಧರ್ಮದ ಧರ್ಮ ಗ್ರಂಥವಾಗಿರುವ 'ಸಿದ್ಧಾಂತ ಶಿಖಾಮಣಿ' ಕೃತಿಯನ್ನು ಬಿಡುಗಡೆ ಮಾಡಿದರು.