ನವದೆಹಲಿ, ಫೆ 17 (Daijiworld News/MB) : ಇಬ್ಬರು ಕ್ರಿಮಿನಲ್ಗಳನ್ನು ಸೋಮವಾರ ಮುಂಜಾನೆ ನಡೆದ ಎನ್ಕೌಂಟರ್ನಲ್ಲಿ ದೆಹಲಿ ಪೊಲೀಸರು ಹತ್ಯೆ ಮಾಡಿದ್ದಾರೆ.
ಎನ್ಕೌಂಟರ್ನಿಂದ ಮೃತಪಟ್ಟವರನ್ನು ರಾಜಾ ಖುರೇಷಿ ಮತ್ತು ರಮೇಶ್ ಬಹದ್ದೂರ್ ಎಂದು ಗುರುತಿಸಲಾಗಿದ್ದು ಸೋಮವಾರ ಮುಂಜಾನೆ ಸುಮಾರು 5 ಗಂಟೆಗೆ ದೆಹಲಿಯ ಪ್ರಹ್ಲಾದ್ ಪುರ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನಲ್ಲಿ ಹೊಡೆದುರುಳಿಸಲಾಗಿದೆ.
ಈ ಇಬ್ಬರು ಆರೋಪಿಗಳು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾದರವರು ಎಂದು ಹೇಳಲಾಗಿದೆ.
ಹಾಗೆಯೇ ಈ ಆರೋಪಿಗಳು ಇತ್ತೀಚೆಗೆ ದೆಹಲಿಯ ಕರವಾಲ್ ನಗರದಲ್ಲಿ ನಡೆದ ಹತ್ಯೆಯಲ್ಲೂ ಶಾಮೀಲಾಗಿದ್ದರು ಎನ್ನಲಾಗಿದೆ.
ಪೊಲೀಸರು ಮತ್ತು ಆರೋಪಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಎರಡೂ ಕಡೆಗಳಿಂದ ಒಟ್ಟು 30 ಸುತ್ತು ಗುಂಡಿನ ದಾಳಿಯಾಗಿದೆ ಎಂದು ವರದಿ ತಿಳಿಸಿದೆ.