ನವದೆಹಲಿ, ಫೆ 17 (Daijiworld News/MB) : ಎರಡು ವಾರಗಳಿಂದ ಜಪಾನ್ನ ಯೊಕೊಹಮಾದಲ್ಲಿ ನಿರ್ಬಂಧ ಮಾಡಿರುವ ಹಡಗಿನಲ್ಲಿರುವ ಮತ್ತಿಬ್ಬರು ಭಾರತೀಯರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಹಡಗಿನಲ್ಲಿರುವ ಐದು ಮಂದಿಗೆ ವೈರಸ್ ಸೋಂಕು ತಗಲಿದೆ.
ಹಾಗೆಯೇ ಮತ್ತಿಬ್ಬರು ಭಾರತೀಯರಿಗೆ ಸಿಓವಿಐಡಿ - 19 ವೈರಸ್ ಸೋಂಕು ತಗಲಿರುವುದು ತಪಾಸಣೆಯಿಂದ ತಿಳಿದು ಬಂದಿದೆ.
ಹಾಗೆಯೇ ನಿರ್ಬಂಧಿಸಲಾಗಿರುವ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿರುವ 137 ಮಂದಿಗೆ ಸೋಂಕು ತಗಲಿರುವುದು ಹೊಸದಾಗಿ ಬೆಳಕಿಗೆ ಬಂದಿದೆ. ಇಬ್ಬರು ಭಾರತತೀಯರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಪಾನ್ಲ್ಲಿರುವ ಭಾರತೀಯ ದೂತಾವಾಸದ ಪ್ರಕಟನೆ ತಿಳಿಸಿದೆ.