ವಾರಣಾಸಿ, ಫೆ 18 (Daijiworld News/MB) : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾನುವಾರ ವಾರಣಾಸಿಗೆ ಒಂದು ದಿನದ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮ ಮಗಳ ವಿವಾಹಕ್ಕೆ ಆಹ್ವಾನ ನೀಡಿದ್ದ ರಿಕ್ಷಾ ಚಾಲಕ ಮಂಗಳ್ ಕೇವಟ್ ಅವರನ್ನು ಭೇಟಿಯಾಗಿದ್ದಾರೆ.
ತಮ್ಮ ಪುತ್ರಿಯ ವಿವಾಹದ ಆಹ್ವಾನ ಪತ್ರವನ್ನು ಪ್ರಧಾನಿ ಮೋದಿಯವರಿಗೆ ಮಂಗಳ್ ಕೇವಟ್ ಅವರು ಕಳುಹಿಸಿದ್ದರು. ಆದರೆ, ಮೋದಿಯವರಿಗೆ ವಿವಾಹಕ್ಕೆ ಬರಲು ಸಾಧ್ಯವಾಗಲಿಲ್ಲ. ಅದಕ್ಕೆ ಬದಲಾಗಿ ಶುಭಾಷಯ ಪತ್ರ ಕಳುಹಿಸಿದ್ದರು.
ಈ ಕುರಿತಾಗಿ ಶನಿವಾರ ಮಾತನಾಡಿದ ಮಂಗಳ್ ಕೇವಟ್ ಅವರು, "ನನ್ನ ಪುತ್ರಿಯ ವಿವಾಹ ಆಮಂತ್ರಣವನ್ನು ನಾನು ಪ್ರಧಾನ ಮಂತ್ರಿ ಕಚೇರಿಗೆ ತೆರಳಿ ನೀಡಿದ್ದೆ. ಫೆ. 8 ರಂದು ಪ್ರಧಾನ ಮಂತ್ರಿಯವರು ವಿವಾಹಕ್ಕೆ ಶುಭಾಷಯ ಕೋರಿದ ಪತ್ರ ನಮಗೆ ಲಭಿಸಿದೆ. ಇದರಿಂದಾಗಿ ನಮಗೆ ಸಂತೋಷ ಉಂಟಾಗಿದೆ" ಎಂದು ಹೇಳಿದ್ದರು.
ಕೇವಟ್ ಅವರು ಹಾಗೂ ಅವರ ಪತ್ನಿ ರೇಣು ದೇವಿ ಪ್ರಧಾನಿ ವಾರಾಣಾಸಿಗೆ ಬಂದ ಸಂದರ್ಭದಲ್ಲಿ ಅವರನ್ನು ಭೇಟಿಯಾಗುವ ಇಚ್ಛೆ ವ್ಯಕ್ತಪಡಿಸಿದ್ದರು.