ತಿರುವನಂತಪುರಂ, ಫೆ 18 (Daijiworld News/MB) : ಕೇರಳದ ಮುನ್ನಾರಿನಲ್ಲಿ ನೋಡಿದ ಬೀದಿ ನಾಯಿಯನ್ನು ವಿದೇಶಿಗರು ತಮ್ಮ ಜೊತೆ ಸ್ವಿಜರ್ಲ್ಯಾಂಡ್ಗೆ ಕೊಂಡೊಯ್ಯಲಿದ್ದಾರೆ.
ಸ್ವಿಜರ್ಲ್ಯಾಂಡ್ ದೇಶದ ಜಾನ್ ಹಾಗೂ ಎಲನ್ ಎಂಬವರು ವಾಸವಾಗಿದ್ದು ಕೇರಳದಲ್ಲಿ ಅವರು ನೋಡಿದ ನಾಯಿ ಅವರಿಗೆ ಇಷ್ಟವಾಗಿದೆ. ಅಷ್ಟು ಮಾತ್ರವಲ್ಲದೇ ತಾವು ಇಲ್ಲ ನೆಲೆಸಿರುವವರೆಗೂ ಈ ನಾಯಿಯನ್ನು ನೋಡಿಕೊಳ್ಳಬೇಕು ಎಂದು ತೀರ್ಮಾನ ಮಾಡಿದ್ದಾರೆ.
ಮೂರು ದಿನಗಳ ಕಾಲ ನಾಯಿಯನ್ನು ನೋಡಿಕೊಂಡ ಅವರಿಗೆ ನಾಯಿ ಮೇಲಿನ ಪ್ರೀತಿ ಇನ್ನಷ್ಟೂ ಹೆಚ್ಚಾಗಿದ್ದು ನಾಯಿಯನ್ನು ದತ್ತು ಪಡೆದು ತಮ್ಮ ಜೊತೆ ಸ್ವಿಜರ್ಲ್ಯಾಂಡ್ಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.
ಈ ನಾಯಿಗೆ ಅವರು "ನೇನಿ" ಎಂದು ಹೆಸರಿಟ್ಟಿದ್ದು ಅದಕ್ಕೆ ಪ್ರತಿದಿನ ಸ್ನಾನ ಮಾಡಿಸಿ ಊಟ ಮಾಡಿಸುತ್ತಾರೆ. ಅಷ್ಟು ಮಾತ್ರವಲ್ಲದೇ ನಾಯಿಯನ್ನು ಗುರುತಿಸಲು ಅದಕ್ಕೆ ಮೈಕ್ರೋಚಿಪ್ ಕೂಡ ಹಾಕಿದ್ದಾರೆ.
ಸದ್ಯ ಈ ವಿದೇಶಿಗರು ನಾಯಿಯನ್ನು ತಮ್ಮೊಂದಿಗೆ ಕರೆದುಕೊಮಡು ಹೋಗಲು ಬೇಕಾದ ದಾಖಲೆಗಳನ್ನು ತಯಾರು ಮಾಡುತ್ತಿದ್ದಾರೆ.
ನೇನಿಯ ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಯಲಿದ್ದು ಅದಾದ ಬಳಿಕ ಜಾನ್ ಹಾಗೂ ಎಲನ್ ನಾಯಿ ನೇನಿಯನ್ನು ಸ್ವಿಜರ್ಲ್ಯಾಂಡ್ಗೆ ಕರೆದೊಯ್ಯಲಿದ್ದಾರೆ.