ಮುಂಬೈ, ಫೆ.19 (DaijiworldNews/PY): "ಸಿಎಎ, ಎನ್ಆರ್ಸಿ ಎರಡು ಪ್ರತ್ಯೇಕ ವಿಚಾರಗಳು. ಎನ್ಪಿಆರ್ ಮೂರನೇ ವಿಚಾರ. ಎನ್ಪಿಆರ್ ಜಾರಿಗೆ ಮಹಾರಾಷ್ಟ್ರ ಅವಕಾಶ ಮಾಡಿಕೊಡಲಿದೆ" ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಸಿಂಧೂದುರ್ಗದಲ್ಲಿ ಮಾತನಾಡಿದ ಅವರು, "ಎನ್ಪಿಆರ್ ಜಾರಿಗೆ ಮಹಾರಾಷ್ಟ್ರ ಅವಕಾಶ ಮಾಡಿಕೊಡಲಿದೆ. ಆದರೆ ಎನ್ಆರ್ಸಿಗೆ ಅವಕಾಶವಿಲ್ಲ. ಏಕೆಂದರೆ ಎನ್ಆರ್ಸಿಯಿಂದ ಹಿಂದೂಗಳಿಗೆ, ಮುಸ್ಲಿಂ ಸೇರಿದಂತೆ ಎಲ್ಲರಿಗೂ ತೊಂದರೆಯಾಗಲಿದೆ. ಸಿಎಎ, ಎನ್ಆರ್ಸಿ ಎರಡು ಪ್ರತ್ಯೇಕ ವಿಚಾರಗಳು. ಎನ್ಪಿಆರ್ ಮೂರನೇ ವಿಚಾರ" ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಪುಣೆಯ ಕೋರ್ಟ್ ಈ ವಿಚಾರವಾಗಿ ಆದೇಶ ನೀಡಿತ್ತು. ಎಲ್ಗಾರ್ ಪರಿಷತ್ ತನಿಖೆಯನ್ನು ಕೇಂದ್ರಕ್ಕೆ ನೀಡುವುದಿಲ್ಲ ಎಂದೂ ಉದ್ಧವ್ ಹೇಳಿದ್ದಾರೆ. ಎಲ್ಗಾರ್ ಪರಿಷತ್ ಕೇಸಿನಲ್ಲಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗಪಡಿಸಿಕೊಂಡಿತ್ತು ಎಂದು ಶರದ್ ಪವಾರ್ ಹೇಳಿದ್ದಾರೆ.