ಉತ್ತರ ಪ್ರದೇಶ, ಫೆ 19 (Daijiworld News/MB) : ಕಾರು ಚಲಾಯಿಸುವಾಗ ಹೆಲ್ಮೆಟ್ ಧರಿಸದೆ ಇದ್ದ ಕಾರಣದಿಂದಾಗಿ ಕಾರು ಚಾಲಕನಿಗೆ ದಂಡ ತೆರುವಂತೆ ರಶೀದಿ ನೀಡಲಾದ ಆಶ್ಚರ್ಯಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಉತ್ತರ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಮನ್ನಾಗೌನ್ನ ಪ್ರಶಾಂತ್ ತಿವಾರಿಯ ಮೊಬೈಲ್ಗೆ ಇ-ಚಲನ್ ಬಂದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
2019 ರ ನವೆಂಬರ್ 30 ರಂದು ಕಾರು ಚಲಾವಣೆ ಮಾಡುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿಲ್ಲದ ಕಾರಣದಿಂದಾಗಿ 500 ರೂಪಾಯಿ ದಂಡ ತೆರಬೇಕು ಎಂದು ಆರ್ಟಿಒ ಪ್ರಶಾಂತ್ ತಿವಾರಿ ಅವರಿಗೆ ತಿಳಿಸಿದೆ ಎಂದು ವರದಿಯಾಗಿದೆ.
2019 ರ ಸೆಪ್ಟೆಂಬರ್ನಲ್ಲಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದವರ ಮೇಲೆ ತೀವ್ರ ದಬ್ಬಾಳಿಕೆ ನಡೆಸಲಾಗಿದೆ. ಈ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ನಂತರದಲ್ಲಿ ಇಂತಹ ಹಲವಾರು ವಿಲಕ್ಷಣ ಘಟನೆಗಳು ನಡೆದಿದೆ. ನೋಯ್ಡಾದ ನಿವಾಸಿಗೆ ಸಂಚಾರ ನಿಯಮ ಉಲ್ಲಂಘನೆ ಮಾಡಿದಕ್ಕಾಗಿ ಒಂದು ನಿಮಿಷದ ಅವಧಿಯಲ್ಲಿ ಎರಡು ಇ- ಚಲನ್ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.