ಬೆಂಗಳೂರು, ಫೆ.19 (DaijiworldNews/PY): ಮಂಗಳೂರಿನಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್ ನಡೆಸಿದ ಕ್ರಮವನ್ನು ಬುಧವಾರ ವಿಧಾನಸಭೆಯಲ್ಲಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಸ್ತಾಪಿಸಿದರು.
ರಾಜ್ಯದ ವಿವಿದೆಡೆ ನಡೆದ ಪ್ರತಿಭಟನೆಗಳನ್ನು ನಿರ್ವಹಿಸುವಲ್ಲಿ ಸರ್ಕಾರ ಎಡವಿರುವ ಮಾಹಿತಿಯನ್ನು ತಿಳಿಸಿದ ಅವರು, ಕಲಬುರ್ಗಿಯಲ್ಲಿ ಪ್ರತಿಭಟನೆ ಆದಾಗ ಗಲಾಟೆ ಆಗಲಿಲ್ಲ. ಆದರೂ ಪ್ರತಿಭಟನೆ ಮಾಡಿದವರನ್ನು ಠಾಣೆಯಲ್ಲಿ ಕೂರಿಸಿಕೊಂಡರು. ವಿಡಿಯೊ ಸಂವಾದದ ಮೂಲಕ ಗೃಹ ಸಚಿವರ ಗಮನಕ್ಕೆ ತರಲಾಯಿತು. ರಾತ್ರಿ 8.30ರವರೆಗೂ ವಿಡಿಯೊ ಸಂವಾದ ನಡೆಯಿತು. ಪ್ರತಿಭಟನಾ ರ್ಯಾಲಿ ಸಂದರ್ಭ ಗೋಲಿಬಾರ್ ಆಗಲು ಕಾರಣವೇನು ಬಲವಂತವಾಗಿ ವಾಹನಕ್ಕೆ ಪೊಲೀಸರು ತುಂಬಿದ್ದು ಏಕೆ ಎಂದು ಕೇಳಿದರು.