ಬೆಂಗಳೂರು, ಫೆ.20 (DaijiworldNews/PY): "ನಾನು ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿಲ್ಲ. ಅವರೊಂದಿಗೆ ಮಾತುಕತೆಯೂ ನಡೆಸಿಲ್ಲ" ಎಂದು ಬಿಜೆಪಿ ಹಿರಿಯ ಶಾಸಕ ಉಮೇಶ್ ಕತ್ತಿ ಹೇಳಿದ್ದಾರೆ.
ಈ ವಿಚಾರವಾಗಿ ಮಾಧ್ಯಮ ವರದಿಗಳಿಗೆ ಪ್ರತಿಕ್ರಿಯಿಸಿದ ಉಮೇಶ್ ಕತ್ತಿ ಅವರು, "ನಾನು ಕುಮಾರಸ್ವಾಮಿ ಅವರನ್ನು ಭೇಟಿಯೂ ಆಗಿಲ್ಲ, ಅವರೊಂದಿಗೆ ಮಾತುಕತೆಯೂ ನಡೆಸಿಲ್ಲ" ಎಂದು ತಿಳಿಸಿದರು.
"ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡಿಲ್ಲ. ನನ್ನ ವಿರುದ್ದ ಕೇವಲ ಗಾಳಿ ಸುದ್ದಿಗಳು ಸೃಷ್ಠಿಯಾಗುತ್ತಿವೆ. ನನಗೆ ಸಚಿವ ಸ್ಥಾನ ಕೊಡುವುದು, ಬಿಡುವುದು ಸಿಎಂ ಬಿಎಸ್ವೈ ಅವರಿಗೆ ತಿಳಿದಿದೆ" ಎಂದು ಹೇಳಿದರು.