ರೋಣ, ಫೆ.20 (DaijiworldNews/PY): ಅಸೂಟಿ ಗ್ರಾಮದ ಮುಸ್ಲಿಂ ಧರ್ಮದ ಯುವ ದಿವಾನ್ ಶರೀಫ್ರವರಿಗೆ ಖಜೂರಿ ಶ್ರೀಮಠದ ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳು ಲಿಂಗದೀಕ್ಷೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುರುಘರಾಜೇಂದ್ರ ಕೋರಣೇಶ್ವರ ಶ್ರೀಗಳು, ಈಗಾಗಲೇ ದಿವಾನ್ ಶರೀಫ್ ಅವರಿಗೆ ಲಿಂಗದೀಕ್ಷೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ದಿನಗಳಲ್ಲಿ ಅಸೂಟಿ ಗ್ರಾಮದ ಖಜೂರಿ ಶ್ರೀಮಠ ಮತ್ತು ಶಾಂತಿಧಾಮಕ್ಕೆ ಮುಸ್ಲಿಂ ಯುವ ದಿವಾನ್ ಶರೀಫರನ್ನು ಪೀಠಾಪತಿ ಮಾಡುವ ವಿಚಾರದ ಬಗ್ಗೆ ತಿಳಿಸಿದರು.
12ನೇ ಶತಮಾನದಲ್ಲಿ ಬಸವೇಶ್ವರರು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ಸಾಗುತ್ತಾ ಬಂದಿದೆ. ನಮ್ಮದು ಬಸವ ತತ್ವ, ನಮ್ಮಲ್ಲಿ ಎಲ್ಲ ಧರ್ಮದವರಿಗೂ ಮುಕ್ತ ಅವಕಾಶವಿದೆ. ಶರೀಫ್ ನಮ್ಮ ಅಸೂಟಿ ಶ್ರೀಮಠದ ಪೀಠಾಪತಿ ಆಗುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ ಎಂದರು.