ಬೆಂಗಳೂರು, ಫೆ.20 (DaijiworldNews/PY): "ತುಮಕೂರು ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ಮಧುಗಿರಿ ಜಿಲ್ಲೆ ರೂಪಿಸಲು ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು" ಎಂದು ಶಾಸಕ ವೀರಭದ್ರಯ್ಯ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಅವರು, "ತುಮಕೂರು ಜಿಲ್ಲೆ ದೊಡ್ಡದಾಗಿದ್ದು, ಅದನ್ನು ವಿಭಜಿಸಿ ಪ್ರತ್ಯೇಕ ಮಧುಗಿರಿ ಜಿಲ್ಲೆ ರೂಪಿಸಿದರೆ ಆಡಳಿತ ಹಾಗೂ ಅಭಿವೃದ್ಧಿ ಕಾರ್ಯಗಳ ನಿರ್ವಹಣೆಗೆ ಪ್ರಯೋಜನವಾಗಲಿದೆ" ಎಂದು ತಿಳಿಸಿದರು.
"ಹಲವಾರು ವರ್ಷಗಳಿಂದ ಮಧುಗಿರಿ ಭಾಗದ ಜನರು ಈ ಬೇಡಿಕೆ ಮುಂದಿಟ್ಟಿದ್ದಾರೆ. ಈ ಬೇಡಿಕೆಗೆ ಸರ್ಕಾರ ಸ್ಪಂದಿಸಬೇಕು" ಎಂದು ಮನವಿ ಮಾಡಿದರು.