ಬೆಂಗಳೂರು, ಫೆ 20 (Daijiworld News/MB) : "ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು" ಮೂಡುಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಒತ್ತಾಯಿಸಿದರು.
ವಿಧಾನಸಭೆಯ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡಿದ ಅವರು, "ತುಳು ನಾಡಿನ ಒಂದು ಕೋಟಿಗೂ ಹೆಚ್ಚು ಜನರು ತುಳು ಭಾಷೆಗೆ ಮಾನ್ಯತೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತುಳು ಭಾಷೆಯನ್ನು ಮಾನ್ಯತೆ ನೀಡಲು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು" ಎಂದು ಒತ್ತಾಯಿಸಿದರು.
"ತುಳು ನಾಡಿನಲ್ಲಿ ಕೊಂಕಣಿ, ಕ್ರೈಸ್ತ ಭಾಷೆ ಉರ್ದು ಮೊದಲಾದ ಭಾಷೆ ಮಾತನಾಡುವವರಿದ್ದಾರೆ. ಆದರೆ ಅವರೆಲ್ಲರೂ ತುಳು ನಾಡಿಗರು, ಅವರು ತುಳುವರು ಅವರೆಲ್ಲರಿಗೂ ತುಳು ಬರುತ್ತದೆ. ತುಳು ನಾಡಿನ ಜನಪದ ಕ್ರೀಡೆ ಕಂಬಳದಂತವು ವಿಶ್ವವಿಖ್ಯಾತಿಯನ್ನು ಹೊಂದಿದೆ. ಇಂತಹ ತುಳು ನಾಡಿದ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಮೊದಲು ಈ ಒತ್ತಾಯ ಅಂಗೀಕಾರವಾಗಬೇಕು. ಹಾಗೂ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು" ಎಂದು ಹೇಳಿದರು.
ತುಳು ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಅಂಗೀಕಾರ ಮಾಡಬೇಕು ಎಂದು ಹೇಳಿದ ಅವರು ಮಾತಿನ ಅಂತ್ಯದಲ್ಲಿ ಎಲ್ಲರಿಗೂ ನಮಸ್ಕಾರ (ಮಾತೆರೆಗ್ಲಾ ನಮಸ್ಕಾರ) ಎಂದು ತುಳು ಬಾಷೆಯಲ್ಲಿ ಹೇಳಿದರು.