ನವದೆಹಲಿ, ಫೆ.20 (DaijiworldNews/PY): ಚೀನಾ ಸರ್ಕಾರವು ಅರುಣಾಚಲ ಪ್ರದೇಶ ಎಂದು ಕರೆಯುವ ಭಾಗವನ್ನು ಯಾವತ್ತೂ ಅಂಗೀಕರಿಸಿಲ್ಲ ಹಾಗೂ ಚೀನಾದ ಟಿಬೆಟ್ ಪ್ರದೇಶದ ದಕ್ಷಿಣ ಭಾಗಕ್ಕೆ ಭಾರತದ ಯಾವುದೇ ರಾಜಕಾರಣಿ ಬರುವುದನ್ನು ನಾವು ವಿರೋಧಿಸುತ್ತೇವೆ ಎಂದು ಚೀನಾ ಹೇಳಿದೆ.
ಅರುಣಾಚಲ ಪ್ರದೇಶದ 34ನೇ ರಾಜ್ಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಶಾ, ಕೈಗಾರಿಕೆ ಮತ್ತು ರಸ್ತೆ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳಿಗೆ ಭಾರತೀಯ ನಾಯಕರು ಭೇಟಿ ನೀಡುವುದನ್ನು ಚೀನಾ ವಿರೋಧಿಸುತ್ತಲೇ ಬಂದಿದ್ದು, ಚೀನಾ-ಭಾರತ ಗಡಿಯ ಪೂರ್ವ ವಲಯದಲ್ಲಿ ಅಥವಾ ಚೀನಾದ ಟಿಬೆಟ್ ಪ್ರದೇಶದ ದಕ್ಷಿಣ ಭಾಗದಲ್ಲಿ ಚೀನಾದ ನಿಲುವು ಸ್ಥಿರ ಹಾಗೂ ಸ್ಪಷ್ಟವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ತಿಳಿಸಿದ್ದಾರೆ.
ಚೀನಾ ಸರ್ಕಾರವು ಅರುಣಾಚಲ ಪ್ರದೇಶ ಎಂದು ಕರೆಯುವ ಭಾಗವನ್ನು ಯಾವತ್ತೂ ಅಂಗೀಕರಿಸಿಲ್ಲ ಹಾಗೂ ಚೀನಾದ ಟಿಬೆಟ್ ಪ್ರದೇಶದ ದಕ್ಷಿಣ ಭಾಗಕ್ಕೆ ಭಾರತದ ಯಾವುದೇ ರಾಜಕಾರಣಿ ಬರುವುದನ್ನು ನಾವು ವಿರೋಧಿಸುತ್ತೇವೆ. ಗಡಿ ಸಮಸ್ಯೆ ಉಲ್ಬಣವಾಗುವಂತೆ ಮಾಡುವ ಯಾವುದೇ ಕಾರ್ಯವನ್ನು ಕೈಗೊಳ್ಳಬೇಡಿ. ಚೀನಾ ಗಡಿಭಾಗದಲ್ಲಿ ಶಾಂತಿ ಹಾಗೂ ನೆಮ್ಮದಿಯನ್ನು ಕಾಪಾಡಿ ಎಂದಿದೆ.