ನವದೆಹಲಿ, ಫೆ.21 (DaijiworldNews/PY): ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೆ.24 ರಂದು ಭಾರತಕ್ಕೆ ಭೇಟಿ ನೀಡಲಿದ್ದು ಈ ಸಂದರ್ಭ ಅಮೆರಿಕ ಜೊತೆ ಐದು ಒಪ್ಪಂದಗಳಿಗೆ ಸಹಿ ಹಾಕುವ ವಿಚಾರವಾಗಿ ನಿರೀಕ್ಷಿಸುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಅಲ್ಲದೇ, ಬೌದ್ಧಿಕ ಆಸ್ತಿ ಹಕ್ಕು, ವ್ಯಾಪಾರ ಸೌಲಭ್ಯ ಮತ್ತು ರಾಷ್ಟ್ರೀಯ ಭದ್ರತೆ ಕ್ಷೇತ್ರಗಳಲ್ಲಿ ಒಪ್ಪಂದ ಏರ್ಪಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ಮೋದಿ–ಟ್ರಂಪ್ ದ್ವಿಪಕ್ಷೀಯ ಮಾತುಕತೆ ಸಂದರ್ಭ ರಕ್ಷಣೆ-ವ್ಯಾಪಾರ ಕ್ಷೇತ್ರದ ಬಾಂಧವ್ಯ ವೃದ್ಧಿ, ಭಯೋತ್ಪಾದನೆ ನಿಗ್ರಹ ಸಹಕಾರ, ಎಚ್1ಬಿ ವೀಸಾ ಕುರಿತಾದ ಭಾರತದ ಕಳವಳ ಪ್ರಮುಖವಾಗಿ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಭೇಟಿಯನ್ನು ಭಾರತ ನಿರೀಕ್ಷಿಸುತ್ತಿದೆ. ಟ್ರಂಪ್ ಅವರ ಭಾರತ ಭೇಟಿಯು ದ್ವಿಪಕ್ಷೀಯ ಬಾಂಧವ್ಯ ಅಭಿವೃದ್ದಿಯಾಗಲಿದೆ ಎಂದು ತಿಳಿಸಿದ್ದಾರೆ.
ಫೆ.24ರಂದು ಟ್ರಂಪ್ ಹಾಗೂ ಅಮೆರಿಕದ ಉನ್ನತಮಟ್ಟದ ನಿಯೋಗ ಅಹಮದಾಬಾದ್ಗೆ ಬರಲಿದ್ದು, ಎರಡು ದಿನಗಳ ಭೇಟಿಯಲ್ಲಿ ಟ್ರಂಪ್ ಹಾಗೂ ಅಮೆರಿಕದ ನಿಯೋಗ ಆಗ್ರಾ ಮತ್ತು ದೆಹಲಿಗೂ ಭೇಟಿ ನೀಡಲಿದೆ.