ಬೆಂಗಳೂರು, ಫೆ.21 (DaijiworldNews/PY): ಟೌನ್ ಹಾಲ್ ಬಳಿ ದೇಶದ್ರೋಹಿ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭ ಮತ್ತೆ ಯುವತಿಯೊಬ್ಬಳು ಪಾಕಿಸ್ತಾನ, ಕಾಶ್ಮೀರ ಪರ ಘೋಷಣೆ ಕೂಗಿದ ಘಟನೆ ಶುಕ್ರವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ವಿರುದ್ಧ ಕನ್ನಡಪರ ಸಂಘಟನೆ ಇಂದು ಬೆಳಗ್ಗೆ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ಯುವತಿಯೊಬ್ಬಳು ಏಕಾಏಕಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಳು.
ಘೋಷಣೆ ಕೂಗಿದ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.