ಧಾರವಾಡ, ಫೆ 22 (Daijiworld News/MB) : ದೇಶದ್ರೋಹಿ ಕ್ರಿಮಿಗಳು ಸಮಾಜ, ದೇಶ ಹಾಗೂ ಕುಲ ಹಾಳು ಮಾಡುವ ಕಾರ್ಯ ಮಾಡುತ್ತಿದೆ. ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದವರನ್ನು ಎನ್ಕೌಂಟರ್ ಮಾಡಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧಾರವಾಡದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, "ಸ್ವಾತಂತ್ರ್ಯ ಹೋರಾಟಗಾರರ ಫ್ರೀಡಂ ಪಾರ್ಕ್ನಲ್ಲಿ ದೇಶದ್ರೋಹಿ ಘೋಷಣೆ ಕೂಗುತ್ತಾರೆ ಎಂದರೆ ನಮ್ಮ ದೇಶದ ಸ್ಥಿತಿ ಯಾವ ಮಟ್ಟಕ್ಕೆ ತಲುಪಿದೆ" ಎಂದು ಹೇಳಿದರು.
ಈ ನಿಟ್ಟಿನಲ್ಲಿ ಸರ್ಕಾರ, ಸಮಾಜ, ಜನರೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾಗಿದೆ. ಈ ವಿಚಾರವನ್ನು ಸರಳವಾಗಿ ತೆಗೆದುಕೊಳ್ಳಬಾರದು. ಈ ಘೋಷಣೆ ಕೂಗಿದವರನ್ನು ಯಾರೋ ಕಾಶ್ಮೀರದ ಹುಡುಗರು ಅವರಿಗೆ ತಿಳಿಯಲಿಲ್ಲ ಎಂದು ಹೇಳಬೇಡಿ. ಇದನ್ನು ಇಲ್ಲಿಯೇ ಮುಕ್ತಾಯ ಮಾಡಬೇಕು. ಎನ್ಕೌಂಟರ್ ಮಾಡಿದಾಗ ಇವರ ಈ ವರ್ತನೆ ನಿಲ್ಲುತ್ತದೆ ಎಂದು ಕಿಡಿಕಾರಿದರು.
ಇಂದು ಪುನಃ ಇನ್ನೋರ್ವ ಯುವತಿ ಪುರಭವನದ ಮುಂಭಾಗ ಹಾಗೆಯೇ ಹೇಳಿದ್ದಾಳೆ. ಇದು ಕೂಡಾ ಖಂಡನೀಯ ವಿಚಾರ. ಇದನ್ನು ತಡೆಯದಿದ್ದಲ್ಲಿ ಇನ್ನಷ್ಟು ಹರಡುತ್ತದೆ. ಇಂತಹ ವ್ಯಕ್ತಿಗಳಿಗೆ ಕ್ಲಲೆಸೆದು ಹತ್ಯೆ ಮಾಡಬೇಕು ಎಂದು ಹೇಳಿದರು.
ಇಂತಹ ದೇಶದ್ರೋಹಿಗಳಿಗೆ ಜಾಮೀನು ಸಿಗದ ಹಾಗೇ ಸರ್ಕಾರ ನೋಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹೊರಗೆ ಬಂದು ಪುನಹ ಅದೇ ಕೆಲಸ ಮಾಡುತ್ತಾರೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಯಾರೇ ಇರಲಿ ದೇಶದ್ರೋಹ ಮಾಡಿದ್ದಲ್ಲಿ ಅದು ದೇಶದ್ರೋಹವೇ. ಈ ವಿಚಾರದಲ್ಲಿ ಕಮ್ಯೂನಿಸ್ಟರು, ಮಾರ್ಕ್ಸ್ವಾದಿಗಳು ವ್ಯವಸ್ಥಿತವಾಗಿ ಸಂಚು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಪಿಎಫ್ಐ, ಎಸ್ಡಿಪಿಐ, ವ್ಯವಸ್ಥಿತ ಸಂಚು ನಡೆಯುತ್ತಿದೆ. ಯುವಕರ ಬ್ರೈನ್ ವಾಶ್ ಮಾಡಿ ಅವರನ್ನು ಬಲಿ ತೆಗೆದುಕೊಳ್ಳುತ್ತಿದ್ದಾರೆ. ಇದೆಲ್ಲದರ ಕೇಂದ್ರವೇ ಜೆಎನ್ಯು. ಅಂದು ಅಫ್ಜಲ್ಗುರು ಜಿಂದಾಬಾಂದ್ ಎಂದು ಹೇಳಿದಾಗ ಎನ್ಕೌಂಟರ್ ಮಾಡಬೇಕಿತ್ತು. ಅಂದೇ ಎನ್ಕೌಂಟರ್ ಮಾಡಿದ್ದಲ್ಲಿ ಇದು ಈ ರೀತಿಯಾಗಿ ಹರಡುತ್ತಿರಲಿಲ್ಲ. ಇವರು ಯಾರೂ ಕೂಡಾ ಈಗ ಈ ರೀತಿಯಾಗಿ ಬೊಗಳುತ್ತಿರಲಿಲ್ಲ ಎಂದಿದ್ದಾರೆ.