ನವದೆಹಲಿ, ಫೆ 22 (Daijiworld News/MB) : ತಮ್ಮ ಪುತ್ರಿ ತಮ್ಮದೇ ಗೋತ್ರಕ್ಕೆ ಸೇರಿದ ಯುವಕನನ್ನು ವಿವಾಹವಾದಳು ಎಂಬ ಕಾರಣಕ್ಕೆ ಆಕೆಯನ್ನು ಬರ್ಬರವವಾಗಿ ಹತ್ಯೆಗೈದು 80 ಕಿ.ಮೀ. ದೂರಕ್ಕೆ ಪುತ್ರಿಯ ಮೃತದೇಹವನ್ನು ಕಾರಿನಲ್ಲಿ ಕೊಂಡೊಯ್ದು ಎಸೆದ ಘಟನೆ ಉತ್ತರ ಪ್ರದೇಶದ ಸಿಕಂದರ್ ಬಾದ್ನಲ್ಲಿ ನಡೆದಿದೆ.
ಮೃತ ಯುವತಿ ಶೀಥಲ್ ಚೌಧರಿ (25) ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬಂಧನ ಮಾಡಿದ್ದಾರೆ. ಮೃತ ಯುವತಿಯ ಪೋಷಕರಾದ ರವೀಂದರ್ ಹಾಗೂ ಸುಮನ, ಹಾಗೆಯೇ ಆಕೆಯ ಸಂಬಂಧಿಗಳಾದ ಅಂಕಿತ್, ಪರ್ವೇಶ್, ಸಂಜಯ್, ಓಮ್ ಪ್ರಕಾಶ್ ಬಂಧಿತರು ಎಂದು ಡಿಸಿಪಿ ಜಾಸ್ಮಿತ್ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಬಂಧಿತರನ್ನು ವಿಚಾರಣೆ ನಡೆಸಿದಾಗ ತಮ್ಮ ಸಂಪ್ರದಾಯದಲ್ಲಿ ತಮ್ಮದೇ ಗೋತ್ರಕ್ಕೆ ಸೇರಿದವರನ್ನು ವಿವಾಹವಾಗಲು ಅವಕಾಶವಿಲ್ಲ ಆದ ಕಾರಣದಿಂದಾಗಿ ಹತ್ಯೆ ಮಾಡಿದೆವು ಎಂದು ಹೇಳಿದ್ದಾರೆ.
ಮೃತ ಯುವತಿಯ ಪತಿ ಅಂಕಿತ್ ಬಾಥಿಯವರು ಪತ್ನಿ ನಾಪತ್ತೆಯಾದ ಕುರಿತು ದೂರು ನೀಡಿದ್ದು ತನಿಖೆ ನಡೆಸಿದ ಪೊಲೀಸರಿಗೆ ಈ ವಿಚಾರ ತಿಳಿದು ಬಂದಿದೆ.
ಈ ಕುರಿತಾಗಿ ಮಾತನಾಡಿದ ಅಂಕಿತ್, "ನಾನು ಹಾಗೂ ಶೀಥಲ್ 2019 ರ ಅಕ್ಟೋಬರ್ನಲ್ಲಿ ವಿವಾಹವಾದೆವು. ಆದರೆ ಮನೆಯಲ್ಲಿ ತಿಳಿಸಿರಲಿಲ್ಲ. 2020 ರ ಜನವರಿ 30 ರಂದು ಶೀಥಲ್ ಮನೆಯಲ್ಲಿ ತನ್ನದೇ ಗೋತ್ರಕ್ಕೆ ಸೇರಿದ ಯುವಕನನ್ನು ವಿವಾಹವಾಗಿರುವುದಾಗಿ ತಿಳಿಸಿದ್ದು ಮನೆಯವರು ಆಕೆಗೆ ಹಿಂಸೆ ಮಾಡಿದ್ದಾರೆ" ಎಂದು ಪೊಲೀಸರಿಗೆ ಹೇಳಿದ್ದಾರೆ.
ಆಕೆಯನ್ನು ಹತ್ಯೆಗೈದ ಪೋಷಕರು ಆಕೆಯ ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ಮೂವತ್ತು ಕಿ.ಮೀ.ದೂರದಲ್ಲಿ ಕಾಲುವೆಗೆ ಎಸೆದಿದ್ದಾರೆ. ಉಳಿದ ಅಪರಾಧಿಗಳು ಇನ್ನೋಂದು ಕಾರಿನಲ್ಲಿ ಜೊತೆಗೆ ಹೋಗಿದ್ದಾರೆ.
ಪತ್ನಿ ನಾಪತ್ತೆಯಾದ ಹಿನ್ನಲೆಯಲ್ಲಿ ಪತಿ ಅಂಕಿತ್ ಎಲ್ಲಾ ಕಡೆಗಳಲ್ಲೂ ವಿಚಾರಿಸಿ ಕೊನೆಗೆ ಪೊಲೀಸರಿಗೆ ದೂರು ನೀಡಿದ್ದನು.
ಫೆ.2 ರಂದು ಉತ್ತರ ಪ್ರದೇಶ ಪೊಲೀಸರಿಗೆ ಶೀಥಲ್ ಮೃತದೇಹ ಕಾಳುವೆಯಲ್ಲಿ ದೊರೆತಿದ್ದು ಆಕೆಯ ಉಡುಪಿನಿಂದಾಗಿ ಮೃತವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ.
ಶೀಥಲ್ ಪತಿ ಅಂಕಿತ್ ತನ್ನ ಪತ್ನಿಯನ್ನು ಅಪಹರಣ ಮಾಡಲಾಗಿದೆ ಎಂದು ದೂರು ನೀಡಿದ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಶೀಥಲ್ ಮನೆಗೆ ತೆರಳಿದ್ದು ಈ ಸಂದರ್ಭದಲ್ಲಿ ಪೋಷಕರು ಆಕೆ ಸಂಬಂಧಿಕರ ಮನೆಗೆ ತೆರಳಿರುವುದಾಗಿ ಹೇಳಿದ್ದರು.
ದೆಹಲಿ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದಾಗ ಹತ್ಯೆ ಮಾಡಿವರು ಬಗ್ಗೆ ತಿಳಿಸಿದ್ದಾರೆ.