ಹೊಸಪೇಟೆ, ಫೆ.22 (DaijiworldNews/PY): ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಾಳನ್ನು ಎನ್ಕೌಂಟರ್ ಮಾಡಿದವರಿಗೆ ಶ್ರೀ ರಾಮ ಸೇನೆಯ ವತಿಯಿಂದ 10 ಲಕ್ಷ ರೂ ಬಹುಮಾನ ನೀಡುವುದಾಗಿ ಸೇನೆಯ ಮುಖಂಡ ಸಂಜೀವ್ ಮರಡಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯಾಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ನ್ಯಾಯಾಲದಲ್ಲಿ ಯಾರೊಬ್ಬರು ಅಮೂಲ್ಯಾಳ ಪರವಾಗಿ ವಕಾಲತ್ತು ವಹಿಸಬಾರದು ಎಂದು ತಿಳಿಸಿದ್ದಾರೆ.
ಒಂದು ವೇಳೆ ಅಮೂಲ್ಯಾಳನ್ನು ಬಿಡುಗಡೆ ಮಾಡಿದರೆ ನಾವೇ ಎನ್ಕೌಂಟರ್ ಮಾಡುತ್ತೇವೆ. ಎನ್ಕೌಂಟರ್ ಮಾಡಿದವರಿಗೆ 10 ಲಕ್ಷ ಬಹುಮಾನ ಕೊಡುತ್ತೇವೆ ಎಂದರು.