ನವದೆಹಲಿ, ಫೆ.22 (DaijiworldNews/PY) : "ಪ್ರಧಾನಿ ಮೋದಿ ಅವರು ಜಾಗತಿಕವಾಗಿ ಯೋಚಿಸಿ, ಅದನ್ನು ಸ್ಥಳೀಯವಾಗಿ ಕಾರ್ಯರೂಪಕ್ಕೆ ತರುತ್ತಾರೆ" ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಎಂದು ಹೇಳಿದ್ದಾರೆ.
ಶನಿವಾರ ಅಂತರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ ಉದ್ದೇಶಿ ಮಾತನಾಡಿದ ನ್ಯಾ. ಅರುಣ್ ಮಿಶ್ರಾ ಅವರು, "ಪ್ರಧಾನಿ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದ ದೂರದೃಷ್ಟಿ ಹಾಗೂ ಬಹುಮುಖ ಪ್ರತಿಭೆ ಹೊಂದಿದ್ದಾರೆ" ಎಂದು ತಿಳಿಸಿದರು.
"ಪ್ರಧಾನಿ ಮೋದಿ ಅವರ ನೇತೃತ್ವದ ವಿಶ್ವ ಸಮುದಾಯದಲ್ಲಿ ಅತ್ಯಂತ ಜವಾಬ್ದಾರಿಯುತ ಹಾಗೂ ಸ್ನೇಹಪರವಾದ ದೇಶವಾಗಿದೆ" ಎಂದರು.
ಈ ಸಂದರ್ಭ, ಬಳಕೆಯಲ್ಲಿಲ್ಲದ 1,500 ಕಾನೂನುಗಳನ್ನು ತೆಗೆದುಹಾಕಿರುವ ವಿಚಾರವಾಗಿ ಪ್ರಧಾನಿ ಮೋದಿ ಹಾಗೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರನ್ನು ಮಿಶ್ರಾ ಅವರು ಅಭಿನಂದಿಸಿದರು.