ನವದೆಹಲಿ, ಫೆ.23 (DaijiworldNews/PY) : ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಉಮರ್ ಅಬ್ಧುಲ್ಲಾ, ಫಾರೂಖ್ ಅಬ್ದೂಲ್ಲಾ ಹಾಗೂ ಮುಫ್ತಿ ಮೆಹಬೂಬಾ ಅವರು ಗೃಹ ಬಂಧನದಲ್ಲಿದ್ದಾರೆ ಅವರ ಬಿಡುಗಡೆಗಾಗಿ ಪ್ರಾರ್ಥಿಸುತ್ತೇನೆ ಎಂದು ರಾಷ್ಟ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮಾಧ್ಯಮವೊಂದರಲ್ಲಿ ಮಾತನಾಡುವ ಸಂದರ್ಭ ರಾಜನಾಥ್ ಸಿಂಗ್ ಅವರು ಈ ಮಾತನ್ನು ಹೇಳಿದ್ದು, ಸದ್ಯ ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದು, ಪರಿಸ್ಥಿತಿ ಸುಧಾರಿಸಿದೆ. ಹಾಗಾಗಿ, ರಾಜಕೀಯ ನಾಯಕರನ್ನು ಬಿಡುಗಡೆ ಮಾಡುವ ವಿಚಾರವಾಗಿಯೂ ತೀರ್ಮಾನ ತೆಗೆದುಕೊಳ್ಳುತ್ತೇನೆ. ಯಾರಿಗೂ ಸರಕಾರ ಕಿರುಕುಳ ನೀಡಿಲ್ಲ. ಭದ್ರತೆಗಾಗಿ ಮಾತ್ರವೇ ಕೆಲ ಕಠಿಣ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ತಿಳಿಸಿದರು.
ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ವೇಳೆ ಉಮರ್ ಅಬ್ಧುಲ್ಲಾ, ಫಾರೂಖ್ ಅಬ್ದೂಲ್ಲಾ ಹಾಗೂ ಮುಫ್ತಿ ಮೆಹಬೂಬಾ ಸೇರಿದಂತೆ ಕಾಶ್ಮೀರದ ಹಲವು ರಾಜಕಾರಣಿಗಳನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು. ಇಂದಿಗೂ ಈ ಗೃಹ ಬಂಧನ ಮುಂದುವರಿದಿದೆ.