ಚಿಕ್ಕಮಗಳೂರು, ಫೆ 23 (Daijiworld News/MB) : ಕಳೆದ ವಾರ ಕಡೂರಿನಲ್ಲಿ ಡಾಕ್ಟರ್ ಪತ್ನಿ ಗೃಹಿಣಿ ಕವಿತಾ ಎಂಬವರ ಹತ್ಯೆ ಪ್ರಕರಣ ತಿರುವು ಪಡೆಯುತ್ತಿದ್ದು, ಆಕೆಯ ಪತಿ ವೈದ್ಯ ಡಾ.ರೇವಂತ್ ಶನಿವಾರ ಬಂಡಿಕೊಪ್ಪಲು ರೈಲ್ವೆ ಗೇಟ್ ಸಮೀಪ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ರೇವಂತ್ ಪ್ರಿಯತಮೆ ಎನ್ನಲಾದ ಹರ್ಷಿತಾ(32) ಎಂಬ ಗೃಹಿಣಿ ಬೆಂಗಳೂರಿನ ರಾಜಾರಾಜೇಶ್ವರಿ ನಗರದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಡೆದಿದೆ.
ತನ್ನ ಪತ್ನಿಯನ್ನು ಅಮಾನುಷವಾಗಿ ಕತ್ತು ಸೀಳಿ ಹತ್ಯೆಗೈದು ದರೋಡೆಕೋರರು ಚಿನ್ನಾಭರಣಗಳು ದೋಚಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ಬಳಿಕ ತನಿಖೆ ಚುರುಕಾಗುತ್ತಿದ್ದಂತೆ ತನ್ನ ಮೇಲೆ ಪೊಲೀಸರಿಗೆ ಶಂಕೆ ಬಂದಿದೆ ಎಂದು ತಿಳಿದ ರೇವಂತ್ ರೈಲಿನಡಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಇದರ ಬೆನ್ನಲ್ಲೇ ರೇವಂತ್ ಪ್ರಿಯತಮೆ ಎನ್ನಲಾದ ಹರ್ಷಿತಾ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹರ್ಷತಾ ಮೂತಃ ತುಮುಕೂರು ನಿವಾಸಿಯಾಗದ್ದ ಬಿಎಂಟಿಸಿ ಬಸ್ ಚಾಲಕ ಸುಧೀಂದ್ರ ಎಂಬವರೊಂದಿಗೆ ವಿವಾಹವಾಗಿದ್ದು ಇವರಿಗೆ ಓರ್ವ ಪುತ್ರಿಯು ಇದ್ದಾಳೆ.
ಈ ಹಿಂದೆ ಕಡೂರಿನಲ್ಲಿ ನೆಲೆಸಿದ್ದ ಇವರು ಆ ಬಳಿಕ ಬೆಂಗಳೂರಿಗೆ ಹೋಗಿ ಅಲ್ಲಿ ನೆಲೆಸಿದ್ದಾರೆ. ಇದೊಂದು ಅಕ್ರಮ ಸಂಬಂಧದಿಂದಾಗಿ ಆಗಿರುವ ಅನಾಹುತ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ರೇವಂತ್ ಹಾಗೂ ಹರ್ಷಿತಾ ನಡುವೆ ಅಕ್ರಮ ಸಂಬಂಧವಿದ್ದು ಈ ವಿಚಾರದಲ್ಲಿ ಕವಿತಾ ಹಾಗೂ ರೇವಂತ್ ನಡುವೆ ಗಲಾಟೆಗಳು ಆಗುತ್ತಿದ್ದವು ಎಂದು ಹೇಳಲಾಗಿದೆ.