ಮೈಸೂರು, ಫೆ.23 (DaijiworldNews/PY): "ಮಹೇಶ್ ಕುಮಟಳ್ಳಿ ಅವರ ವಿಚಾರದಲ್ಲಿ ರಮೇಶ್ ಜಾರಕಿಹೊಳಿ ಅವರು ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಅದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ" ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾವ ಶಾಸಕರು ನಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಸಭೆ ಮಾಡಿಲ್ಲ, ಎಲ್ಲವೂ ವದಂತಿ" ಎಂದು ತಿಳಿಸಿದರು.
ದೇಶ ದ್ರೋಹದ ಘೋಷಣೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, "ಈ ದೇಶದ ಅನ್ನ ತಿಂದು ಇಲ್ಲಿಯೇ ದೇಶ ದ್ರೋಹದ ಬಗ್ಗೆ ಮಾತನಾತ್ತಾರೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತನಿಖೆ ಪ್ರಗತಿಯಲ್ಲಿದೆ, ರಾಜ್ಯ ಸರ್ಕಾರ ಎಲ್ಲಾ ಕ್ರಮ ತೆಗೆದುಕೊಂಡಿದೆ. ಅವರು ಮಾಡಿರುವ ಅಪರಾಧ ಕ್ಷಮಿಸುವಂತದಲ್ಲ" ಎಂದರು.