ಬೆಂಗಳೂರು, ಫೆ.23 (DaijiworldNews/PY) : "ರಾಜ್ಯದಲ್ಲಿ ಕ್ಯಾಸಿನೊ ಜಾರಿಗೆ ತಂದರೆ, ಸರ್ಕಾರ ಜೂಜಿಗೆ ಬೆಂಬಲ ಕೊಟ್ಟಂತೆ" ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಸವಕಲ್ಯಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕ್ಯಾಸಿನೊ ಅದೊಂದು ಜೂಜು ಆಟ. ಶ್ರೀಲಂಕಾ,ಮಲೇಶಿಯಾ ಸೇರಿ ಹಲವು ರಾಷ್ಟ್ರಗಳಲ್ಲಿ ನಡೆಯುತ್ತದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಕ್ಯಾಸಿನೋ ತರುತ್ತೇವೆ ಅಂದರೆ ಸರ್ಕಾರ ಜೂಜಿಗೆ ಬೆಂಬಲ ಕೊಟ್ಟಂತೆ. ಜೂಜಿನ ಪರವಾಗಿ ಸರ್ಕಾರ ಇದ್ದ ಹಾಗಾಗುತ್ತದೆ" ಎಂದು ಹೇಳಿದರು.
"ಸಿಟಿ ರವಿ ಆಗಾಗ ಕ್ಯಾಸಿನೊ ಆಡುತ್ತಿರಬೇಕು. ಹೀಗೆಲ್ಲ ಹೇಳೋದಕ್ಕೆ ಅದೇ ಕಾರಣವಿರಬಹುದು" ಎಂದರು.