ಧಾರವಾಡ, ಫೆ.24 (DaijiworldNews/PY) : ಕೋರ್ಟ್ ನಿಯಮದಂತೆ ಸಿಇಒ ಮೂಲಕ ದೇಶದ್ರೋಹ ಪ್ರಕರಣದ ಆರೋಪಿಗಳ ಜಾಮೀನಿಗೆ ಅರ್ಜಿಸಲ್ಲಿಸಿಲ್ಲ ಎಂದು ನ್ಯಾಯಾಲಯ ತಿಳಿಸಿದ್ದು, ಬೆಂಗಳೂರಿನಿಂದ ಬಂದ ವಕೀಲರು ಪ್ರತಿಭಟನೆ ಎದುರಿಸಿ ವಾಪಾಸಾಗಿದ್ದಾರೆ.
ಹುಬ್ಬಳ್ಳಿಗೆ ಬಂದ ನರೇಂದ್ರ, ಮೈತ್ರಿ ಸೇರದಂತೆ ನಾಲ್ವರು ವಕೀಲರು ಪೊಲೀಸ್ ಠಾಣೆಯಲ್ಲಿ ಮಾಹಿತಿ ಪಡೆದು ಬಳಿಕ ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಬಂದರು. ಎರಡೂ ಕಡೆಗಳಲ್ಲಿಯೂ ಪ್ರತಿಭಟನೆ ಎದುರಿಸಿದ ವಕೀಲರು, ಪೊಲೀಸ್ ಭದ್ರತೆಯಲ್ಲಿ ನ್ಯಾಯಾಲಯದ ಆವರಣ ಪ್ರವೇಶಿಸಿ ಅರ್ಜಿ ಸಲ್ಲಿಸಿದ್ದರು.
ಕೋರ್ಟ್ ನಿಯಮದ ಪ್ರಕಾರ ಅರ್ಜಿಯನ್ನು ಕೋರ್ಟ್ ಸಿಇಓ ಮೂಲಕವೇ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದ ಕಾರಣದಿಂದ ವಕೀಲರು ವಾಪಾಸಾಗಿದ್ದಾರೆ.