ಅಹಮದಾಬಾದ್, ಫೆ 24 (Daijiworld News/MB) : "ಭಾರತದೊಂದಿಗೆ 3 ಶತಕೋಟಿ ಡಾಲರ್ನ ರಕ್ಷಣಾ ಒಪ್ಪಂದ ಮಾಡುತ್ತೇವೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದರು.
ಅಹಮದಬಾದ್ನಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲ ಮಾತನಾಡಿದ ಅವರು, "ನಾವು ಜಗತ್ತಿನ ಅತ್ಯಂತ ಉತ್ತಮವಾದ ಮಿಲಿಟರಿ ಉಪಕರಣಗಳನ್ನು ಉತ್ಪಾದಿಸುತ್ತೇವೆ. ನಾಳೆ 3 ಶತಕೋಟಿ ಡಾಲರ್ ಮೊತ್ತದ ರಕ್ಷಣಾ ಉಪಕರಣಗಳನ್ನು ಭಾರತಕ್ಕೆ ಮಾರಾಟ ಮಾಡುತ್ತೇವೆ. ಅತ್ಯುತ್ತಮ ಹೆಲಿಕಾಪ್ಟರ್ಗಳು ಹಾಗೂ ಇತರ ಉಪಕರಣಗಳು ಇದರಲ್ಲಿ ಸೇರಿದೆ" ಎಂದು ಹೇಳಿದರು.
"ಈ ಸಂದರ್ಭವನ್ನು ನಾವು ಎಂದಿಗೂ ನೆನಪಲ್ಲಿ ಇಟ್ಟುಕೊಳ್ಳುತ್ತೇವೆ. ನರೇಂದ್ರ ಮೋದಿಯವರು ಟೀ ಮಾರುತ್ತಿದ್ದರು. ಈಗ ದೇಶದ ಪ್ರಧಾನಿಯಾಗಿದ್ದಾರೆ. ಅವರನ್ನು ಎಲ್ಲರೂ ಪ್ರೀತಿಸುತ್ತಾರೆ. ನಮ್ಮನ್ನು ಎಲ್ಲರೂ ಪ್ರೀತಿ ಮಾಡುವಂತೆ ಬಾಳುವುದು ಬಹಳ ಕಷ್ಟದ ವಿಚಾರ" ಎಂದು ಅವರು ಹೇಳಿದರು.
"ಎಲ್ಲಾ ಧರ್ಮದವರು ಅಕ್ಕಪಕ್ಕದಲ್ಲೇ ಪ್ರಾರ್ಥನೆ ಮಾಡಲು ಅವಕಾಶವಿರುವ ಅಪರೂಪದ ದೇಶ ಭಾರತ. ಇಲ್ಲಿನ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಗುಜರಾತ್ನ ಹೆಮ್ಮಯಲ್ಲ. ಅವರು ಪರಿಶ್ರಮ ಹಾಗೂ ಬದ್ಧತೆಗೆ ಪ್ರತೀಕ. ಭಾರತವನ್ನು ಮೋದಿ ಅಭಿವೃದ್ದಿಯೆಡೆಗೆ ಕೊಂಡೊಯ್ಯುತ್ತಿದ್ದಾರೆ" ಎಂದು ಹೇಳಿದರು.
'ಭಾರತಕ್ಕೆ ಅತ್ಯಾಧುನಿಕವಾದ ಶಸ್ತ್ರಾಸ್ತ್ರಗಳನ್ನು ನೀಡಲು ನಾವು ಬದ್ಧರಾಗಿದ್ದೇವೆ. ನಾವು ಇಸ್ಲಾಮಿಕ್ ಉಗ್ರರ ಸವಾಲುಗಳಿಗೆ ಜೊತೆಯಾಗಿ ಉತ್ತರ ಕಂಡುಕೊಂಡಿದ್ದೇವೆ" ಎಂದರು.
"ಜಗತ್ತಿನ ಎಲ್ಲಾ ದೇಶಗಳಿಗೂ ತಮ್ಮ ಗಡಿಭದ್ರತೆ ಮಾಡುವ ಹಾಗೂ ನುಸುಳುಕೋರರಿಗೆ ಕಡಿವಾಣ ಹಾಕುವ ಹಕ್ಕು ಇದೆ" ಎಂದು ತಿಳಿಸಿದರು.
"ಭಾರತದೊಂದಿಗೆ ಪಾಕಿಸ್ತಾನ ಹಲವು ಒಪ್ಪಂದಗಳನ್ನು ಮಾಡಲಿದೆ ಎಂದು ಹೇಳಿದ ಅವರು, ಮೋದಿಯವರೊಂದಿಗೆ ಚೌಕಾಸಿ ಮಾಡುವುದು ತುಂಬಾ ಕಷ್ಟ" ಎಂದು ಅಭಿಪ್ರಾಯಪಟ್ಟರು.
"ಡಿಡಿಎಲ್ಜಿ ಹಾಗೂ ಶೋಲೆಯಂತಹ ಬಾಲಿವುಡ್ ಸಿನಿಮಾಗಳು, ಭಾಂಗ್ರಾ ನೃತ್ಯವನ್ನು ಜಗತ್ತಿನೆಲ್ಲೆಡೆ ಜನರು ಇಷ್ಟಪಡುತ್ತಾರೆ" ಎಂದರು.
"ಅವರ ಭಾಷಣವನ್ನು ದೇವರ ಸ್ಮರಣೆಯೊಂದಿಗೆ ಮುಕ್ತಾಯ ಮಾಡಿದ್ದು ಕೊನೆಯಲ್ಲಿ ಭಾರತ ಹಾಗೂ ಅಮೆರಿಕಕ್ಕೆ ದೇವರ ಆಶೀರ್ವಾದ ಸಿಗಲಿ" ಎಂದು ಹೇಳಿದರು.