ನವದೆಹಲಿ, ಫೆ.24 (DaijiworldNews/PY) : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ-ವಿರೋಧಿ ಗುಂಪುಗಳ ನಡುವೆ ಈಶಾನ್ಯ ದೆಹಲಿಯ ಜಾಫರಾಬಾದ್, ಭಜನ್ಪುರ್ ಹಾಗೂ ಮೌಜ್ಪುರ್ ಪ್ರದೇಶಗಳಲ್ಲಿ ಘರ್ಷಣೆಯ ಸಂದರ್ಭ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.
ಗೋಕುಲ್ ಪುರಿ, ಭಜನ್ಪುರ್, ಮೌಜ್ ಪುರ್ ಹಾಗೂ ಜಾಫಾರಾಬಾದ್ನಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಸಿಎಎ ಪರ ಇರುವವರು ಹಾಗೂ ವಿರೋಧಿ ಹೋರಾಟಗಾರರ ನಡುವೆ ಕಲ್ಲುತೂರಾಟ ನಡೆದಿದೆ.
ವಾಹನಗಳಿಗೆ ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಕೆಲವೊಂದು ಕಟ್ಟಡಗಳಿಗೂ ಬೆಂಕಿ ಹಚ್ಚಲಾಗಿದೆ. ಇದೀಗ ವೈರಲ್ ಆಗುತ್ತಿರುವ ಫೋಟೊದಲ್ಲಿ ದುಷ್ಕರ್ಮಿಯೊಬ್ಬ ಪಿಸ್ತೂಲ್ ತೋರಿಸಿದ್ದಾನೆ.